ಚಿಕ್ಕೋಡಿ : ಹಲವು ವರುಷಗಳಿಂದ ಹಾರ್ನಿಯಾ ತೊಂದರೆಯಿಂದ ಬಳಲುತ್ತಿರುವ, ಪ್ರೋ. ಪಿ.ಎಮ್.ಭೆಂಡೆ ಇವರಿಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ, ಡಾ. ಎಚ್.ಕೆ.ಪಠಾಣ ಇವರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ,
ವೈದ್ಯರ ಹಾಗೂ ಸಿಬ್ಬಂದಿಗಳ ಸೇವೆಯನ್ನು ಮೆಚ್ಚಿ, ಖುಷಿಯಾದ ಭೆಂಡೆಯವರು ಆಸ್ಪತ್ರೆಯಲ್ಲಿ ವೈದ್ಯರಿಗೆ ಮತ್ತು ಸಿಬ್ಬಂದಿಯವರಿಗೆ ಹೂ ಗುಚ್ಚ ಮತ್ತು ಸಿಹಿ ನೀಡಿ ಸತ್ಕರಿಸಿದರು,
ಫಲಾನುಭವಿಗಳಾದ ಪ್ರೋ. ಪಿ.ಎಮ್.ಭೆಂಡೆ ಅವರು ಮಾತನಾಡಿ ನಾನು ಬಹಳ ವರ್ಷಗಳಿಂದ ಹಾರ್ನಿಯಾ ಕಾಯಲೆಯಿಂದ ಬಳಲುತ್ತಿದ್ದೆ, ಬಹಳಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಸುಧಾರಣೆ ಆಗದ ನಾನು ಹೈರಾನಾಗಿದ್ದೆ, ಒಂದು ಸಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನೋಡ ಬೇಕೆಂದು, ಚಿಕ್ಕೋಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದೆ, ಅಲ್ಲಿಯ ವೈದ್ಯರು ಸಿಬ್ಬಂದಿಗಳು ನನಗೆ ಧೈರ್ಯ ನೀಡಿದರು, ಡಾ. ಎಚ್. ಕೆ.ಪಠಾಣ ವೈದ್ಯರು ನನಗೆ ಶಸ್ತ್ರಚಿಕಿತ್ಸೆ ಮಾಡಿದರು, ಇಲ್ಲಿಯ ವ್ಯವಸ್ಥೆಯ ಬಗ್ಗೆ ಭಾವುಕರಾಗಿ ಮಾತನಾಡಿದರು.
ಮುಖ್ಯ ವೈದ್ಯಾಧಿಕಾರಿಯವರಾದ ಡಾ. ಮಹೇಶ ನಾಗರಬೆಟ್ಟ ಮಾತನಾಡಿ, ನಮ್ಮ ಆಸ್ಪತ್ರೆಯು ಸತತ ಸೇವೆ ಮಾಡಲು ಸಿದ್ಧವಾಗಿದೆ, ಇಲ್ಲಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ನಮಗೆ ತುಂಬಾ ಸಂತಸವೆನಿಸುತ್ತದೆ, ಸರ್ವತೋಮುಖ ಆಸ್ಪತ್ರೆಯ ಅಭಿವೃದ್ಧಿಗಾಗಿ ನಾವು ಸತತ ಪ್ರಯತ್ನಿಸುತ್ತಿದ್ದೇವೆ, ಚಿಕ್ಕೋಡಿ ಭಾಗದಲ್ಲಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ನಮಗೆ ಉತ್ತಮ ಕಾರ್ಯ ನಿರ್ವಹಿಸಲು ಹುಮ್ಮಸ್ಸು ಬರುತ್ತದೆ ಎಂದು ಹೇಳಿದರು,
ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಎಚ್. ಕೆ. ಪಠಾಣ ಮಾತನಾಡಿ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ, ಇದು ನನ್ನ ಧರ್ಮ, ಫಲಾನುಭವಿಗಳ ತೃಪ್ತಿಯೇ ನಮಗೆ ಪ್ರಸಾದವಾಗಿದೆ, ಯಾವಾಗಲೂ ಸೇವೆಗಾಗಿ ಸಿದ್ಧರಿದ್ದೇವೆ, ಸಾರ್ವಜನಿಕರು, ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿಯ ಉಚಿತ ಸೌಲಭ್ಯಗಳ ಸದುಪಯೋಗ ಪಡೆಯಬೇಕೆಂದು ಹೇಳಿದರು. ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ವಿಶೇಷವಾಗಿ ಜನರಿಗೆ ಸರಕಾರಿ ಶಾಲೆ ಮತ್ತು ಸರಕಾರಿ ಆಸ್ಪತ್ರೆಯ ಬಗ್ಗೆ ವಿಶ್ವಾಸ ಇರುವುದಿಲ್ಲ, ಆದರೆ ಸರಕಾರಿ ಸಂಸ್ಥೆಗಳಲ್ಲಿ ಸಿಗುವ ಉತ್ತಮ ಸೌಲಭ್ಯಗಳು ಬೇರೆಲ್ಲಿಯೂ ಸಿಗಲಾರವು, ಉತ್ತಮ ದರ್ಜೆಯ ಶಿಕ್ಷಣ ಮತ್ತು ಅನುಭವ ಪಡೆದ ಸಿಬ್ಬಂದಿಗಳನ್ನು ಹೊಂದಿರುವ ನಮ್ಮ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಕರೆ ನೀಡಿದರು, ಚಿಕಿತ್ಸೆ ಪಡೆದು ತೃಪ್ತಿ ಹೊಂದಿದ ಜನರು ಬೇರೆಯವರಿಗೂ ಹೇಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಡಾ. ವಿಶಾಲ ಹಡಪದ, ಡಾ. ಸಚಿನ ಬಾಕರೆ, ಡಾ. ವರ್ಧಮಾನ ಬದನಿಕಾಯಿ, ಡಾ. ಕಾವೇರಿ ಉಪ್ಪಿ, ಡಾ. ಸುಪ್ರೀಯಾ, ಡಾ. ರೂಪಾ, ಡಾ. ಜ್ಯೋತಿ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ಸಿದ್ಧಪ್ಪಾ ಪೂಜಾರಿ ನಿರೂಪಿಸಿ ವಂದಿಸಿದರು.
ವರದಿ: ರಾಜು ಮುಂಡೆ