ಚಿಕ್ಕೋಡಿ : ಮಹಾಶಿವರಾತ್ರಿಯ ದಿನದಂದು ಮಹಾದೇವ ದೇವಾಲಯಲ್ಲಿ ಉದ್ದನೆಯ ಭಕ್ತಾದಿಗಳ ಸರತಿ ಸಾಲು.ಕರ್ನಾಟಕದ ಚಿಕ್ಕೋಡಿಯಲ್ಲಿ, ಮಹಾ ಶಿವರಾತ್ರಿಯ ಸಂದರ್ಭದಲ್ಲಿ, ಚಿಕ್ಕೋಡಿ ಪಟ್ಟಣದ ಹೊಸಪೇಟ ಗಲ್ಲಿಯಲ್ಲಿರುವ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಶ್ರೀ ಮಹಾದೇವ (ತ್ರಿಲಿಂಗ) ದೇವಾಲಯದಲ್ಲಿ ಭಕ್ತರ ನಂಬಿಕೆ ಮತ್ತು ಭಕ್ತಿಯ ಅದ್ಭುತ ನೋಟ ಕಂಡುಬರುತ್ತಿದೆ.
ಇವತ್ತಿನ ಈ ಸಂಭ್ರಮದಲ್ಲಿ ಶ್ರೀ ಮಹಾದೇವನ ದರ್ಶನ ಪಡೆಯಲು ಭಕ್ತರ ಅಪಾರ ಜನಸಮೂಹ ಸೇರಿರುವುದು ಕಂಡುಬರುತ್ತದೆ.
ಭಕ್ತರ ಸಂಖ್ಯೆ ತುಂಬಾ ಹೆಚ್ಚಾಗಿದ್ದರಿಂದ ದೇವಾಲಯ ಆಡಳಿತ ಮಂಡಳಿ ಮತ್ತು ಅರ್ಚಕರು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ ಆದಾಗ್ಯೂ, ಆಡಳಿತವು ದರ್ಶನಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡಿದೆ, ಇದರಿಂದಾಗಿ ಭಕ್ತರು ಗಂಟೆಗಟ್ಟಲೆ ಕಾಯುವ ಬದಲು ಮಹಾದೇವನ ದರ್ಶನದಿಂದ ಆಧ್ಯಾತ್ಮಿಕ ತೃಪ್ತಿಯನ್ನು ಪಡೆಯುತ್ತಿದ್ದಾರೆ.

ತದನಂತರ ಶಿವನಿಗೆ ನೀರು ಮತ್ತು ಹಾಲು ಅರ್ಪಿಸಿ ಎಲ್ಲ ಸಕಲ ಪೂಜೆಯ ಸಾಮಗ್ರಿಗಳೊಂದಿಗೆ ಪೂಜಾ ಕಾರ್ಯಕ್ರಮ ನಡೆಯಿತು ನಂತರ ಶಿವನ ಅಭಿಷೇಕ ತದನಂತರ ದೇವಸ್ಥಾನದ ಕಮಿಟಿ ಮಂಡಳಿ ಹಾಗೂ ಭಕ್ತಾದಿಗಳ ಉಪಸ್ಥಿತಿಯಲ್ಲಿ ಮಹಾದೇವನ ಎತ್ತಿನ ಬಂಡಿಯಲ್ಲಿ ಮೆರವಣಿಗೆ.
ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತು. ದೇವಾಲಯದ ಅಂಗಳವು ಶಿವನ ಮಂತ್ರಗಳಿಂದ ಪ್ರತಿಧ್ವನಿಸಿತು ನಂತರ ಭಕ್ತಾದಿಗಳಿಗೆ ದರ್ಶನ ಪ್ರಸಾದ ಅರ್ಪಣೆ ನಡೆಯಿತು
ಪ್ರತಿ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಶ್ರೀ ಮಹಾದೇವ್ ಟ್ರಸ್ಟ್ ಸಮಿತಿಯ ಮಾಜಿ ಅಧ್ಯಕ್ಷರು ರವಿ ಹಂಪಣ್ಣವರ್ ನಮ್ಮಅವರು ವಾಹಿನಿಗೆ ತಿಳಿಸಿದರು.
ನಂತರ ನಮ್ಮ ವಾಹಿನಿನೊಂದಿಗೆ ಮಾತನಾಡಿದ ನಿತ್ಯ ಮಹದೇವನ ಪೂಜರು ಶ್ರೀ ಶ್ರೀ ಎಸ್ ಶಿವಶಂಕರ್ ಶಾಸ್ತ್ರಿ ಹಿರೇಮಠ್ ಅವರು ಶ್ರೀ ಮಹಾದೇವ (ತ್ರಿಲಿಂಗ) ದೇವಾಲಯವು ಮೂರು ಲಿಂಗಗಳ ಸಂಗಮವನ್ನು ಹೊಂದಿರುವ ಭವ್ಯ ಮತ್ತು ಸುಂದರವಾದ ದೇವಾಲಯವಾಗಿದೆ ಈ ದೇವಾಲಯವು ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾಗಿದ್ದು, ಅಂದಿನಿಂದ ಭಕ್ತರು ಭಕ್ತಿಯಿಂದ ಪೂಜೆ, ಅಭಿಷೇಕ ಮತ್ತು ನೈವೇದ್ಯಗಳನ್ನು ನಡೆಸುತ್ತಿದ್ದಾರೆ ಎಂದರು.
ಇನ್ನು ಪ್ರತಿ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಮಹಾಪ್ರಸಾದ ಧಾನ್ಯ ಹೆಚ್ಚಾಗುತ್ತದೆ ನಡೆದಿದೆ ಎಂದರು ಆದ್ದರಿಂದ ಭಕ್ತರಿಗೆ ಮಹಾಪ್ರಸಾದ ಯಾವುದೇ ಒಂದು ತೊಂದರೆ ಇಲ್ಲದೆ ಪ್ರತಿಭಕ್ತರಿಗೆ ಮುಟ್ಟುತ್ತಿದೆ ಎಂದರು.
ಈ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷರಾದ ಶ್ರೀ ಸುರೇಶ್ ಫರಾಳೆ, ಶ್ರೀ ರವೀಂದ್ರ ಅಕ್ಕತಂಗೆರಹಾಳ, ಶ್ರೀ ರವೀಂದ್ರ ಹಂಪಣ್ಣನವರ್, ಶ್ರೀ ಸಿದ್ದೇಶ್ವರ ಪಾಟೀಲ, ಶ್ರೀ ಶಿವರಾಜ್ ಮಿರ್ಜಿ, ಶ್ರೀ ಬಸವರಾಜ್ ಮುಸುಂಡಿ, ಶ್ರೀ ಶಂಕರ್ ಖಿಲಾರೆ. ಶ್ರೀ ಸಂಜು ಜಾದವ, ಶ್ರೀ ಅಜಿತ್ ಕಾಗಲೆ, ಆನಂದ ಬೋಳಾಜ, ಎಲ್ಲ ಸಸ್ರಾರು ಭಕ್ತಾದಿಗಳು ಹಾಗೂ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಇದೆ ಮಹದೇವ್ ಮಹಾಶಿವರಾತ್ರಿಯ ಸಂಭ್ರಮ ನಡೆಯಿತು.
ವರದಿ: ರಾಜು ಮುಂಡೆ




