ಹುಬ್ಬಳ್ಳಿ : ರೈಲ್ವೆ ಇಲಾಖೆ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಹಿನ್ನೆಲೆಯಲ್ಲಿ, ಗೂಡ್ಸ್ ರೈಲ್ವೆ ಮ್ಯಾನೇಜರ್ ಮತ್ತು ಎಲ್‌ಡಿಸಿ ಹುದ್ದೆಗಳ ಪರೀಕ್ಷೆಗೆ ರೈಲ್ವೆ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ಇಲ್ಲ. ಹಾಗಾಗಿ ಇಂದು ಹುಬ್ಬಳ್ಳಿಯ ರೈಲ್ವೆ ವಿಭಾಗೀಯ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ಕೇವಲ ಹಿಂದಿ ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆ ಕ್ರಮ ಖಂಡಿಸಿ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದರು.
ಹುಬ್ಬಳ್ಳಿಯ ರೈಲ್ವೆ ವಿಭಾಗಿಯ ಕಚೇರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಕನ್ನಡ ಭಾಷೆಯನ್ನು ಕಡೆಗಣಿಸಿದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ.
ಇದೀಗ ಕರವೇ ಹೋರಾಟಕ್ಕೆ ರೈಲ್ವೆ ಇಲಾಖೆ , ಮಣಿದಿದೆ ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಯನ್ನು ಮುಂದೂಡಿದೆ. ಹಿಂದಿ ಇಂಗ್ಲಿಷ್ ನಲ್ಲಿ ರೈಲ್ವೆ ಇಲಾಖೆ ಪರೀಕ್ಷೆಗೆ ಮುಂದಾಗಿತ್ತು.
ಇವತ್ತು ನಡೆಯಬೇಕಿದ್ದ ರೈಲ್ವೇ ಪಧೋನ್ನತಿ ಪರೀಕ್ಷೆಯನ್ನು ಇಲಾಖೆ ಮುಂದೂಡಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ತಿಳಿಸುತ್ತೇವೆ ರೈಲ್ವೆ ಇಲಾಖೆ ಭರವಸೆ ಕೊಟ್ಟಿದೆ.




