Ad imageAd image

ನಾಡಿನ ನೈಜ ಹೊಸ ವರ್ಷ ಯುಗಾದಿಯ ಸಂಭ್ರಮಾಚರಣೆ

Bharath Vaibhav
ನಾಡಿನ ನೈಜ ಹೊಸ ವರ್ಷ ಯುಗಾದಿಯ ಸಂಭ್ರಮಾಚರಣೆ
WhatsApp Group Join Now
Telegram Group Join Now

ಬೆಳಗಾವಿ: ನಗರ ಹಾಗೂ  ನಾಡಿನಾದ್ಯಂತ ಇಂದು ಶ್ರೀ ವಿಶ್ವಾವಸು ನಾಮ ಸಂವತ್ಸರದ ಯುಗಾದಿ ಹಬ್ಬದ ಸಂಭ್ರಮ, ಮುಂಜಾನೆಯಿಂದ ಮಕ್ಕಳು, ತಾಯಂದಿರು ಮನೆಯನ್ನು ಸಾರಿಸಿ ರಂಗೋಲಿ ಬಳಿದು ಸ್ನಾನ ಮಾಡಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಅದರ ಜೊತೆಗೆ ಯುಗಾದಿ ಹಬ್ಬದ ಅಡುಗೆ ಘಮ ಘಮಿಸುತ್ತಿದ್ದು, ಮನೆ ಮಂದಿಯೆಲ್ಲ ಬೆವಿನ ತಪ್ಪಲದಿಂದ ಹಾಗೂ ಕೊಬ್ಬರಿ ಎಣ್ಣೆ ಮಜ್ಜನ ಮಾಡಿಕೊಂಡು ಸ್ನಾನ ಮಾಡಿ, ದೇವಸ್ಥಾನಗಳಲ್ಲಿ  ಬೆಳಗ್ಗೆಯಿಂದಲೇ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರುತ್ತಿವೆ. ”ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.. ಮತ್ತೆ ಯುಗಾದಿ ಬಂದಿದೆ. ಭಾರತದ ನೈಜ ಹೊಸ ವರ್ಷ ಯುಗಾದಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಪೂಜೆಗೆ ಶ್ರೇಷ್ಠ ಸಮಯ

ಈ ವರ್ಷ ಮಳೆ-ಬೆಳೆಗಳು ಚೆನ್ನಾಗಿ ಆಗಿ ಸಮೃದ್ಧಿ ತರಲಿ, ಯಾವುದೇ ಪ್ರಕೃತಿ ವಿಕೋಪಗಳು ಘಟಿಸದೆ ಇರಲಿ ಎಂದು ಜನರು ಆಶಿಸುತ್ತಿದ್ದಾರೆ.

ಚಳಿಗಾಲ ಕಳೆದು ಬೇಸಿಗೆ ವಸಂತ ಋತುವಿನ ಆಗಮನ ಹೊತ್ತಿನಲ್ಲಿ ಪ್ರಕೃತಿಯಲ್ಲಿ ಚಿಗುರಿ ಫಲಗಳು ಸಿಗುವ ಹೊತ್ತಿನಲ್ಲಿ ಯುಗಾದಿ ಆಚರಿಸುತ್ತಿದ್ದು, ದಕ್ಷಿಣ ಭಾರತೀಯರಲ್ಲಿ ಇದರ ಆಚರಣೆ ಹೆಚ್ಚು. ಉತ್ತರ ಭಾರತೀಯರು ಈ ದಿನವನ್ನು ಚೈತ್ರ ನವರಾತ್ರಿಯ ಮೊದಲ ದಿನವೆಂದು ಆಚರಿಸುತ್ತಾರೆ. ಭಕ್ತಾದಿಗಳು ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮಹಾರಾಷ್ಟ್ರ ಕಡೆ ಗುಡಿ ಪಾಡ್ವ ಎಂದು ಕರೆಯುತ್ತಾರೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ನಾಡಿ ನ ಜನತೆಗೆ ಶುಭಕೋರಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!