ಸಮಸ್ಯೆಯಾಗಿ ಉಳಿದ ಅಹವಾಲುಗಳು ಸಾರ್ವಜನಿಕರಲ್ಲಿ ನಿರಾಸಕ್ತಿ

Bharath Vaibhav
ಸಮಸ್ಯೆಯಾಗಿ ಉಳಿದ ಅಹವಾಲುಗಳು ಸಾರ್ವಜನಿಕರಲ್ಲಿ ನಿರಾಸಕ್ತಿ
WhatsApp Group Join Now
Telegram Group Join Now

ಸಿರುಗುಪ್ಪ :-ತಾಲೂಕಿನ ಸಿ.ಡಿ.ಪಿ.ಓ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆಯ ಬಳ್ಳಾರಿ ವಿಭಾಗದ ಲೋಕಾಯುಕ್ತ ಪೋಲೀಸ್ ಅಧೀಕ್ಷಕ ಸಿದ್ದರಾಜು ಅವರ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸುವಲ್ಲಿ ಸಾರ್ವಜನಿಕರ ನಿರಾಸಕ್ತಿ ಕಂಡುಬಂದಿತು.

ಮೂಲಭೂತ ಸೌಲಭ್ಯಗಳಾದ ಆರೋಗ್ಯ, ಶಿಕ್ಷಣ, ಶುದ್ದ ಕುಡಿಯುವ ನೀರು, ಸ್ವಚ್ಛತೆ ಹಾಗೂ ಆಸ್ತಿಗೆ ಸಂಬಂದಿಸಿದ ದೂರುಗಳು ಪ್ರತೀ ಸಭೆಯಲ್ಲಿ ಸಲ್ಲಿಕೆಯಾಗುತ್ತಿದ್ದರೂ ಸಂಬಂದಿಸಿದ ಅಧಿಕಾರಿಗಳಿಂದ ಕಾರ್ಯವಿಳಂಬ ಆಗುತ್ತಿರುವುದು ಭ್ರಷ್ಟಾರಕ್ಕೆ ದಾರಿಯಾಗುತ್ತಿದೆಂದು ಅರ್ಜಿ ಸಲ್ಲಿಸಿ ಬೇಸತ್ತ ಸಾರ್ವಜನಿಕರು ಸಭೆಯಲ್ಲಿ ದೂರಿದರು.

ಸಭೆಯಲ್ಲಿ ಅಲಬನೂರು ಗ್ರಾಮದ ನರಸಪ್ಪ ಅವರು ಗಡಿಭಾಗದ ಗ್ರಾಮಗಳಾದ ಬಿ.ಎಮ್.ಸೂಗೂರು, ಇಟ್ಟಿಗೆಹಾಳ್, ರಾವಿಹಾಳ್, ಅಲಬನೂರು, ನಾಗರಹಾಳ್, ಹಚ್ಚೊಳ್ಳಿ ಭಾಗಕ್ಕೆ 72, 73, 74 ಡಿಪಿಗಳಿಗೆ ಕಾಲುವೆ ನೀರು ಹರಿಯುತ್ತಿಲ್ಲ.

ಈ ಭಾಗದಲ್ಲಿನ ಕಾಲುವೆಗಳು ದುರಸ್ತಿಗೊಳಗಾಗಿದ್ದು ಸರಿಪಡಿಸಿ ನೀರು ಹರಿಸಬೇಕೆಂದು ಅಹವಾಲು ಸಲ್ಲಿಸಿದರು.ಅಲ್ಲದೇ ಅಲಬನೂರು ಗ್ರಾಮದಲ್ಲಿರುವ ಮದ್ಯದ ಅಂಗಡಿಯಿಂದ ಜಮೀನುಗಳಲ್ಲಿ, ರಸ್ತೆಗಳ ಅಕ್ಕಪಕ್ಕದಲ್ಲಿ, ನೈಸರ್ಗಿಕ ಹಳ್ಳಗಳಲ್ಲಿ ಬಿದ್ದಿರುವ ತ್ಯಾಜ್ಯಗಳು ಬಿದ್ದಿದ್ದು ಇದಕ್ಕೆ ಕಡಿವಾಣ ಹಾಕಬೇಕು.

ನೆರೆಯ ಆಂದ್ರಭಾಗಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿರುವ ಬಗ್ಗೆ, ರೈತರಿಗೆ, ಪ್ರಾಣಿಗಳಿಗೆ ತೊಂದರೆಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.ನಗರಸಭೆಗೆ ಸಂಬಂದಿಸಿದಂತೆ ಅಬ್ದುಲ್ ಹುಸೇನ್ ಅವರು ಅರ್ಜಿ ಸಲ್ಲಿಸಿ ಬೀದಿಬದಿ ಹಾಗೂ ಮಾರುಕಟ್ಟೆಗಳಲ್ಲಿನ ವ್ಯಾಪಾರಿಗಳಿಂದ ಶುಲ್ಕ ವಸೂಲಿ ಮಾಡುತ್ತಿರುವ ಟೆಂಡರ್‌ದಾರರು ಇದುವರೆಗೂ ನಗರಸಭೆಗೆ ಹಣವನ್ನು ಕಟ್ಟಿರುವುದಿಲ್ಲ.

ಜನಸಾಮಾನ್ಯರು ತೆರಿಗೆ ಕಟ್ಟದಿದ್ದಲ್ಲಿ ನಳ ಸಂಪರ್ಕ ಕಡಿತಗೊಳಿಸುವ ಅಧಿಕಾರಿಗಳು ಇಷ್ಟು ದೊಡ್ಡ ಮೊತ್ತದ ಹಣವನ್ನು ಕಟ್ಟದೇ ನಗರಸಭೆಗೆ ನಷ್ಟವನ್ನುಂಟು ಮಾಡುತ್ತಿರುವವರ ಕ್ರಮಕ್ಕೆ ಮುಂದಾಗದಿರುವ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದರು.

ಇದೇ ವೇಳೆ ಲೋಕಾಯುಕ್ತ ಸಿ.ಪಿ.ಐ ಸಂಗಮೇಶ್, ತಹಶೀಲ್ದಾರ್ ಶಂಷಾಲಂ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇದ್ದರು.

ವರದಿ.ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!