ಚಿಟಗುಪ್ಪ : ತಾಲ್ಲೂಕಿನ ಮನ್ನಾಖೇಳಿ ಗ್ರಾಮದಲ್ಲಿ ಗ್ರಾಮ ಪಂಚಾಯತ ವತಿಯಿಂದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಗ್ರಾಮದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತದ ಹತ್ತಿರ ಭಾನುವಾರ ಬ್ರಹತ್ ಆದ ವೇದಿಕೆ ಸಿದ್ದಪಡಿಸಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ,ನೃತ್ಯ,ಭಾಷಣ ಸೇರಿ ಅನೇಕ ಸಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಅಲ್ಲದೆ,ಪತ್ರಕರ್ತ,ಪೊಲೀಸ್,ಸ್ವಚ್ಛತೆಗಾರ,ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ, ಆರೋಗ್ಯ ಸೇವಕರಿಗೆ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮಾತು ಸೇವೆ ಸಲ್ಲಿಸುತ್ತಿರುವವರಿಗೆ ಸನ್ಮಾನಿಸಿ ಗೌರವಿಸಿದರು.
ನಿರಂತರವಾಗಿ ಸಮಾಜದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನ ಮಾಡುವುದರಿಂದ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ.ರಾಷ್ಟೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವ ಕೂಡ ಒಂದು ದೊಡ್ಡ ಹಬ್ಬ ಅದಕ್ಕಾಗಿ ಇಂದು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.ಕಾರ್ಯಕ್ರಮ ಆಯೋಜನಕ್ಕೆ ಸಹಕರಿಸಿದ ಗ್ರಾಮ ಪಂಚಾಯತ ಸರ್ವ ಸದಸ್ಯರಿಗೆ ಹಾಗೂ ಗ್ರಾಮದ ಗಣ್ಯರಿಗೆ, ಶಾಲೆ ಮಕ್ಕಳಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಭಾಗ್ಯಜ್ಯೋತಿ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಾಜಕುಮಾರ ಅಗಸಿ,ಉಪಾಧ್ಯಕ್ಷರಾದ ಮೈಮುನಾ ಬೇಗಂ ಸೇರಿ ಗ್ರಾಮ ಪಂಚಾಯತ ಸದಸ್ಯರು, ಗಣ್ಯರು,ಶಾಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವರದಿ : ಸಜೀಶ ಲಂಬುನೋರ




