Ad imageAd image

ಶಾಂತಿಯುತ ಹಬ್ಬ ಆಚರಣೆಗೆ ಧರ್ಮಗುರುಗಳ, ಗಣ್ಯರ ಮನವಿ

Bharath Vaibhav
ಶಾಂತಿಯುತ ಹಬ್ಬ ಆಚರಣೆಗೆ ಧರ್ಮಗುರುಗಳ, ಗಣ್ಯರ ಮನವಿ
WhatsApp Group Join Now
Telegram Group Join Now

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಹೋಳಿ ಹುಣ್ಣಿಮೆ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸವಾಯಿ ಗಂಧರ್ವ ಪ್ರಯುಕ್ತ ಸೌಹಾರ್ದ ಸಭೆಯನ್ನು ಆಯೋಜಿಸಲಾಯಿತು.
ವಿವಿಧ ಧರ್ಮಗಳ ನಡುವೆ ಸೌಹಾರ್ದ ಮತ್ತು ಭ್ರಾತೃತ್ವ ಬೆಳೆಸುವ ಉದ್ದೇಶದಿಂದ ನಡೆದ ಈ ಸಭೆಯಲ್ಲಿ ಮೂರುಸಾವಿರಮಠದ ಜಗದ್ಗುರುಗಳು, ಮುಸ್ಲಿಂ ಧರ್ಮಗುರು ತಾಜುದ್ದೀನ ಪೀರಾ, ಅಲ್ಲದೇ ಕ್ರಿಶ್ಚಿಯನ್, ಸಿಖ್ ಧರ್ಮಗುರುಗಳು ಭಾಗವಹಿಸಿದ್ದರು.
ವೇದಿಕೆ ಮೇಲೆ ಉದ್ಯಮಿಕ ಡಾ.ಚಿಗರುಪಾಟಿ ವಿಎಸ್‌ವಿ ಪ್ರಸಾದ್, ಅಂಜುಮನ್ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಗಣ್ಯರಾದ ಅಲ್ತಾಫ್ ಹಳ್ಳೂರು, ಮಹೇಂದ್ರ ಸಿಂಘಿ, ಗುರುನಾಥ ಉಳ್ಳಿಕಾಶಿ, ಭಾಸ್ಕರ ಜಿತೂರಿ ಮುಂತಾದವರಿದ್ದರು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿವಿಧ ಧರ್ಮಗುರುಗಳು, ಗಣ್ಯರು “ನಾವು ಎಲ್ಲರೂ ಒಂದೇ ಸಮಾಜದವರು ಎನ್ನುವ ಭಾವನೆಯಿಂದ ಜಾತಿ-ಧರ್ಮ ಬೇಧವಿಲ್ಲದೆ ಸೌಹಾರ್ದದಿಂದ ಬಾಳಬೇಕು. ಪರಸ್ಪರ ಗೌರವ ಮತ್ತು ಸಹಾನುಭೂತಿ ಹೊಂದಿದರೆ ಸಮಾಜದಲ್ಲಿ ಶಾಂತಿ ನೆಲೆಸಲಿದೆ.ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಸದಾ ಪೊಲೀಸರೊಂದಿಗೆ ನಿಲ್ಲೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿ, ಎಲ್ಲಾ ಜಾತಿ-ಧರ್ಮಗಳ ನಾಯಕರು ಹಾಗೂ ಸಂಘಟನೆಗಳು ಸಮಾಜದಲ್ಲಿ ಏಕತೆ ಮತ್ತು ಸಹಕಾರದ ಮನೋಭಾವ ಬೆಳೆಸಬೇಕು. ಅರ್ಥವಿಲ್ಲದ ಜಾತಿ-ಧರ್ಮದ ಹೆಸರಿನಲ್ಲಿ ವೈಮನಸ್ಯ ಹುಟ್ಟುಹಾಕುವುದು ತಪ್ಪು. ಎಲ್ಲರೂ ಪರಸ್ಪರ ಸಹಕರಿಸಿ ಉತ್ತಮ ಬಾಂಧವ್ಯದಿAದ ಸಮಾಜದಲ್ಲಿ ಬದುಕಬೇಕು” ಎಂದು ಮನವಿ ಮಾಡಿದರು.

ವರದಿ: ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!