ಮಸ್ಕಿ: ಹೌದು ಪ್ರಿಯ ವೀಕ್ಷಕರೆ ಮಸ್ಕಿ ಪುರಸಭೆಯ ಬಸವೇಶ್ವರ ನಗರದ ವಾರ್ಡ್ ನಂಬರ್ ಒಂದರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಸೇರಿದಂತೆ ಸಾರ್ವಜನಿಕರ ಮನೆಗಳ ಸುತ್ತ ನೀರು ಆವರಿಸಿಕೊಂಡು ಕೆರೆಯಂತೆ ನಿರ್ಮಾಣವಾಗಿ ಡೆಂಗಿ, ಮಲೇರಿಯಾ, ಹರಡುವ ಭೀತಿ ಹಾಗು ಸಾರ್ವಜನಿಕರು ದೈನ ದಿನ ಕೆಲಸ ಕಾರ್ಯಗಳಿಗೆ ಓಡಾಡಲು ಪರದಾಡುವಂತಾಗಿದೆ. ಎಂದು ವಾರ್ಡಿನ ನಿವಾಸಿಗಳು ಮಾಧ್ಯಮದ ಮುಂದೆ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

ಮಳೆ ಬಂದರೆ ಸಾಕು ಇದೇ ಪರಿಸ್ಥಿತಿ ಸರ್ ನಾವು ಹಲವಾರು ಬಾರಿ ವಾರ್ಡಿನ ಸದಸ್ಯರಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಹೇಳಿದರೆ ಯಾವುದೇ ರೀತಿ ಪ್ರಯೋಜನ ಇಲ್ಲದಂತಾಗಿದೆ. ಮಸ್ಕಿ ಪಟ್ಟಣದಲ್ಲಿ ಈ ನಮ್ಮ ವಾರ್ಡಿನಿಂದಲೇ ಅತಿ ಹೆಚ್ಚು ಪುರಸಭೆಗೆ ಟ್ಯಾಕ್ಸ್ ಪಾವತಿಸಲಾಗುತ್ತದೆ ಆದರೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಈ ನಮ್ಮ ವಾರ್ಡಿನಗೆ ಸರ್ಕಾರದ ಸೌಲಭ್ಯಗಳು ನೀಡದೆ ನಿರ್ಲಕ್ಷ ತೋರುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ ವರದಿಗಾರರು ಬಸನಗೌಡ ಪುರಸಭೆ ಸದಸ್ಯ ರಿಗೆ ಫೋನ್ ಮಾಡಿ ನಮಸ್ಕಾರ ಸರ್ ನಿಮ್ಮ ವಾರ್ಡಿನಲ್ಲಿ ಸಾರ್ವಜನಿಕರ ಮನೆ ಸುತ್ತಲೂ ನೀರು ನಿಂತು ಕೆರೆಯಂತೆ ನಿರ್ಮಾಣವಾಗಿದೆ ಸಾರ್ವಜನಿಕರು ಪರದಾಡುತ್ತಿದ್ದಾರೆ ಇದಕ್ಕೆ ಪರ್ಯಾಯ ವ್ಯವಸ್ಥೆ ಏನು ಕ್ರಮ ಕೈಗೊಂಡಿದ್ದಿರಿ ಮತ್ತು ಸಮಸ್ಯೆ ಹೇಗೆ ಬಗೆಹರಿಸುತ್ತೀರಿ ಎಂದು ಕೇಳಿದಾಗ ಪುರಸಭೆ ಸದಸ್ಯ ಹೇಳೋದೇ ಬೇರೆ ನಾನೇನ್ ಮಾಡ್ಲಿ ಸಾರ್ ಸರ್ಕಾರ ಅನುದಾನ ಕೊಟ್ಟಿಲ್ಲ ಸರ್ ನನಗೆ ಪುರಸಭೆ ಅಂತ ಮೂರು ಲಕ್ಷ ಅನುದಾನ ಮೀಸಲಿಟ್ಟಿದ್ದಾರೆ ಅದರಲ್ಲಿ ಯಾವ ಕೆಲಸ ಅಂತ ಮಾಡಬೇಕು ಸಾರ್ ಅನುದಾನ ಬಿಡುಗಡೆಯಾದ ತಕ್ಷಣ ಆ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಜಾಣ ಕುರುಡರಂತೆ ಜಾರಿಕೊಂಡರು. ಒಟ್ಟಾರೆಯಾಗಿ ಇಬ್ಬರ ನಡುವೆ ಕೂಸು ಬಡವಾಯಿತು ಎಂಬಂತೆ ಸಾರ್ವಜನಿಕರ ಗೋಳು ಕೇಳುವವರು ಯಾರು? ಎಂಬ ಯಕ್ಷಪ್ರಶ್ನೆಯಾಗಿದೆ.




