Ad imageAd image

ಐಪಿಎಲ್ ಪುನರಾರಂಭ: ಮೇ. 17 ರಂದು ಉಳಿದ ಪಂದ್ಯಗಳು

Bharath Vaibhav
ಐಪಿಎಲ್ ಪುನರಾರಂಭ: ಮೇ. 17 ರಂದು ಉಳಿದ ಪಂದ್ಯಗಳು
WhatsApp Group Join Now
Telegram Group Join Now

ಜೂನ್ 3 ರಂದು ಫೈನಲ್ ಪಂದ್ಯ

ಇದೇ ತಿಂಗಳು 17 ರಿಂದ ಇಂಡಿಯನ್​ ಪ್ರೀಮಿಯರ್​ ಲೀಗ್​​ (IPL) ಮತ್ತೇ ಪ್ರಾರಂಭವಾಗಲಿದೆ. ನಿನ್ನೆ ಬಿಸಿಸಿಐ ಸಭೆ ನಡೆಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದರ ಪ್ರಕಾರ ಜೂನ್ 3 ರಂದು ಟೂರ್ನಮೆಂಟ್​ನ ಫೈನಲ್ ಪಂದ್ಯ ನಡೆಯಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದಾಗಿ ಇದೇ ತಿಂಗಳು 8 ರಂದು ನಡೆದಿದ್ದ ಪಂಜಾಬ್​ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಎರಡೂ ದೇಶಗಳ ನಡುವೆ ಯುದ್ಧದ ಸನ್ನವೇಶ ಎದುರಾಗಿದ್ದ ಕಾರಣ ಕೂಡಲೇ ಐಪಿಎಲ್​ ಅನ್ನು ಒಂದು ವಾರಕ್ಕೆ ಮುಂದೂಡಲಾಗಿತ್ತು. ಸದ್ಯ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದರಿಂದ ಐಪಿಎಲ್​ ಮರು ಪ್ರಾರಂಭಕ್ಕೆ ಬಿಸಿಸಿಐ ಮುಂದಾಗಿದೆ.

ಮೊದಲ ಪಂದ್ಯ ಈ ತಿಂಗಳ 17 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇದರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ತಂಡಗಳು ಮುಖಾಮುಖಿ ಆಗಲಿವೆ. ಉಳಿದ ಲೀಗ್ ಪಂದ್ಯಗಳೆಲ್ಲವು ಬೆಂಗಳೂರು, ಜೈಪುರ, ದೆಹಲಿ, ಲಕ್ನೋ, ಅಹಮದಾಬಾದ್ ಮತ್ತು ಮುಂಬೈನಲ್ಲಿ ನಡೆಯಲಿವೆ. ಪ್ಲೇಆಫ್ ಪಂದ್ಯಗಳ ಸ್ಥಳಗಳ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಸದ್ಯ ಟೂರ್ನಿಯಲ್ಲಿ ಇನ್ನೂ 17 ಪಂದ್ಯಗಳು ನಡೆಯಬೇಕಿದ್ದು, ಮುಂದೂಡಲ್ಪಟ್ಟ ಪಂಜಾಬ್ ಮತ್ತು ದೆಹಲಿ ಪಂದ್ಯವೂ ಇದರಲ್ಲಿ ಸೇರಿದೆ.

ಆರ್ಸಿಬಿಗೆ ದೊಡ್ಡ ಲಾಭಭಾರತ ಮತ್ತು ಪಾಕ್​ ನಡುವಿನ ಸಂಘರ್ಷ ದಿಂದಾಗಿ ಐಪಿಎಲ್​ ಮುಂದೂಡಿದ್ದು ಆರ್​ಸಿಬಿಗೆ ವರದಾನವಾಗಿದೆ. ತಂಡದ ನಾಯಕ ರಜತ್​ ಪಟಿದಾರ್​​ ಕೈಬೆರಳು ಗಾಯಕ್ಕೆ ತುತ್ತಾಗಿದ್ದರು. ಇದೀಗ ಐಪಿಎಲ್​ ಒಂದು ವಾರ ಸ್ಥಗಿತಗೊಂಡಿದ್ದು ಮತ್ತು ಮೇ.17 ರಿಂದ ಪುನರಾರಂಭವಾಗುತ್ತಿದೆ. ಇನ್ನು ನಾಲ್ಕು ದಿನಗಳು ಸಮಯ ಇರುವುದರಿಂದ ರಜತ್​ ಚೇತರಿಸಿಕೊಂಡು ಪಂದ್ಯಕ್ಕೆ ಮರಳುವ ಭರವಸೆ ಇದೆ. ಇದು ತಂಡಕ್ಕೆ ದೊಡ್ಡ ಲಾಭವಾಗಲಿದೆ.

RCB vs LSG ಪಂದ್ಯ ಯಾವಾಗ?: ಭಾರತ ಮತ್ತು ಪಾಕ್​ ನಡುವಿನ ಉದ್ವಿಗ್ನತೆಯಿಂದಾಗಿ ರದ್ದಾಗಿದ್ದ ಆರ್​ಸಿಬಿ ಮತ್ತು ಲಕ್ನೋ ಪಂದ್ಯವನ್ನು ಕೊನೆಯಲ್ಲಿ ಆಯೋಜಿಸಲಾಗಿದೆ. ಇದು ಮೇ 27ರಂದು ಲಕ್ನೋದಲ್ಲಿ ನಡೆಯಲಿದೆ.

ಆರ್ಸಿಬಿ ಪಂದ್ಯಗಳು

ಮೇ 17 – RCB vs KKR, ಬೆಂಗಳೂರು

ಮೇ 23 – RCB vs SRH, ಬೆಂಗಳೂರು

ಮೇ 27 – LSG vs RCB, ಲಖನೌ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!