ವಿಜಯಪುರ : ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನನ್ನು ನಾವ್ಯಾಕೆ ಒಪ್ಪಿಕೊಳ್ಳಬೇಕು ಎಂದು ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ವಾಗ್ದಾಳಿ ಮುಂದುವರಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತಾಗಿ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪರನ್ನು ಹೊರಗೆ ಮಾತ್ರ ಪೂಜ್ಯ ತಂದೆ ಅಂತಾ ವಿಜಯೇಂದ್ರ ಕರೆಯುವುದು.
ಆದರೆ ಮನೇಲಿ ಅವರನ್ನು ಮುದಿಯಾ ಅಂತಾನೆ ಎಂದು ಆರೋಪಿಸಿದರು. ಇನ್ನು ತನ್ನ ತಂದೆಯ ಸಹಿ ನಕಲು ಮಾಡಿ, ಅವರಪ್ಪನನ್ನೇ ವಿಜಯೇಂದ್ರ ಜೈಲಿಗೆ ಕಳುಹಿಸಿದ್ದ. ಅಂತವರನ್ನು ನಮ್ಮ ಹೈಕಮಾಂಡ್ ಮುಂದೆ ಅವಕಾಶ ನೀಡಲ್ಲ ಎಂಬ ನಂಬಿಕೆ ಇದೆ.
ಸಭೆಗಳಲ್ಲಿ, ಪತ್ರಕರ್ತರ ಮುಂದೆ ಮಾತ್ರ ಅಪ್ಪಾಜಿ ಅಂತಾ ಕರೀತಾನೆಂಬುವುದು ಗೊತ್ತಿದೆ. ಯಡಿಯೂರಪ್ಪಗೆ ವಿಜಯೇಂದ್ರ ಏನೂ ಕಿಮ್ಮತ್ತು ಕೊಡಲ್ಲ. ಆದ್ದರಿಂದ ಯಡಿಯೂರಪ್ಪ ಅವರು ಮಗನ ವ್ಯಾಮೋಹ ಬಿಟ್ಟು, ಪಕ್ಷಕ್ಕಾಗಿ ಶ್ರಮಿಸಲಿ ಎಂದು ಯತ್ನಾಳ್ ಹೇಳಿದರು.
ನಿಮ್ಮ ಮಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ. ಅವನ ವ್ಯಾಮೋಹ ಬಿಟ್ಟು, ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡು ಮನೆಯಲ್ಲಾದರೂ ಆರಾಮಾಗಿರಿ ಎಂದು ವ್ಯಂಗ್ಯವಾಡಿದರು. ಯಾವ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರೂ ವಿಜಯೇಂದ್ರ ತಮ್ಮ ಪಕ್ಷದ ಅಧ್ಯಕ್ಷ ಎಂದು ಒಪ್ಪಲ್ಲ ಎಂದರು.




