Ad imageAd image

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾತಂತ್ರ ಹೋರಾಟಗಾರರ ಪಾತ್ರ ಸ್ಲಾಗನೀಯ

Bharath Vaibhav
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾತಂತ್ರ ಹೋರಾಟಗಾರರ ಪಾತ್ರ ಸ್ಲಾಗನೀಯ
WhatsApp Group Join Now
Telegram Group Join Now

ಕಲಘಟಗಿ : -ಸ್ಥಳೀಯ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯ ಕಲಘಟಗಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ನಿಯಮಿತ ಧಾರವಾಡ ಜಿಲ್ಲೆಯ ಸ್ವತಂತ್ರ ಹೋರಾಟಗಾರರು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ರೆ.ಬ್ರ ವರ್ಗೀಸ್ ರೆ.ಬ್ರ ಸಿರಿಲ್ ಪ್ರಭಾರಿ ಪ್ರಾಚಾರ್ಯರಾದ ಶ್ರೀಮತಿ ನವೀನಾ ರೇಡ್ಡರ ಉಪಸ್ಥಿತರಿದ್ದು ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನ ಜಾಫರ್. ಇ. ಬಾವನವರ (ಇತಿಹಾಸ ಉಪನ್ಯಾಸಕರು, ಎನ್ಎಸ್ಎಸ್ ಸಂಯೋಜನಾಧಿಕಾರಿ ರವರು “ಕಲಘಟಗಿಯ ಸ್ಥಳೀಯ ಐತಿಹಾಸಿಕ ಇತಿಹಾಸ “ಹಿನ್ನೆಲೆಯನ್ನು ಧಾರವಾಡ ಜಿಲ್ಲೆಯ ಸ್ವತಂತ್ರ ಹೋರಾಟಗಾರರಾದ ಗೋವಿಂದ್ ರಾವ್ ಗುತ್ತಲ್ ರವರು” ಬ್ರಿಟಿಷ್ ವಿರೋಧಿ ಹೋರಾಟದಲ್ಲಿ ಧಾರವಾಡ ಗೋಲಿಬಾರ್ ಹತ್ಯೆ, ಅಸಹಕಾರ, ಕಾನೂನು ಭಂಗ, ಅರಣ್ಯ ಸತ್ಯಾಗ್ರಹ, ಕರ ನಿರಾಕರಣೆ, ಚಳುವಳಿಯಲ್ಲಿ ಭಾಗವಹಿಸಿ ಸ್ವತಂತ್ರ ಹೋರಾಟದಲ್ಲಿ ನಿರ್ವಹಿಸಿದ ಪಾತ್ರದ ಕುರಿತು, ದೇಶ ಸೇವೆಗೆ ಎಲ್ಲರೂ ಕೈಜೋಡಿಸಬೇಕು ಎಲ್ಲರಲ್ಲೂ ರಾಷ್ಟ್ರಾಭಿಮಾನ ದೇಶಾಭಿಮಾನಗಳ ಗುಣಗಳನ್ನು ಬೆಳೆಸಿಕೊಳ್ಳಬೇಕೆಂಬ ಅರಿವನ್ನ ಮೂಡಿಸಿದರು.

ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು ಅಲ್ಲದೆ ಈ ಕಾರ್ಯಕ್ರಮದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶ್ರೀಮತಿ ಲಕ್ಷ್ಮೀಬಾಯಿ ಹರಿಜನ್ ಮತ್ತು ಜಾನಪದ ಕಲಾತಂಡ ಧಾರವಾಡ ರವರಿದ್ ಲಾವಣಿ ಗಿಗಿ ಪದ ದೇಶಭಕ್ತಿ ಗೀತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ನಮ್ಮ ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಉಪನ್ಯಾಸವರ್ಗದವರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಶ್ರೀ ಬಸವರಾಜ್ ಬಡಿಗೇರ್ ನಿರೂಪಿಸಿದರು

ವರದಿ:- ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!