Ad imageAd image

ವಿಕಲಚೇತನ ಮಕ್ಕಳ ಶೈಕ್ಷಣಿಕ ಮಾಪನೆಗೆ ಶಿಕ್ಷಕರ ಪಾತ್ರ ಮುಖ್ಯ : ಬಿ. ಓ. ಮಾರಯ್ಯ..

Bharath Vaibhav
ವಿಕಲಚೇತನ ಮಕ್ಕಳ ಶೈಕ್ಷಣಿಕ ಮಾಪನೆಗೆ ಶಿಕ್ಷಕರ ಪಾತ್ರ ಮುಖ್ಯ : ಬಿ. ಓ. ಮಾರಯ್ಯ..
WhatsApp Group Join Now
Telegram Group Join Now

ಚಾಮರಾಜನಗರ:-ಯಳಂದೂರು. ವಿಕಲಚೇತನ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಸರ್ಕಾರದ ಸವಲತ್ತು ಸದ್ಬಳಕೆ ಮಾರಿಕೊಂಡು ಮುಖ್ಯ ವಾಹಿನಿಗೆ ಬರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ರವರು ತಿಳಿಸಿದರು.ಪಟ್ಟಣದ ಬಿ. ಆರ್. ಸಿ. ಕಚೇರಿಯಲ್ಲಿ ಮಾರ್ಗದರ್ಶಿ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆ ವತಿಯಿಂದ ವಿಕಲಚೇತನ ಮಕ್ಕಳ ಶೈಕ್ಷಣಿಕ ಮೌಲ್ಯ ಮಾಪನ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಾರಯ್ಯ ಮಾತನಾಡಿ ವಿಕಲಚೇತನರ ಮಕ್ಕಳನ್ನು ವಿಶೇಷವಾಗಿ ಸಾಮಾನ್ಯ ಮಕ್ಕಳಂತೆ ಎಲ್ಲರ ಜೊತೆ ಬೆರೆಯುವಂತೆ ಶಿಕ್ಷಕರು ಮಾಡಬೇಕು, ಎಲ್ಲಾ ಹಕ್ಕುಗಳು ಅವು ಕರ್ತವ್ಯಗಳನ್ನು ಇವರಿಗೆ ನೀಡಬೇಕು, ಅಂಗವಿಕಲರ ಶೈಕ್ಷಣಿಕ ಮೌಲ್ಯಕ್ಕೆ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ, ಮಕ್ಕಳಿಗೆ ಅವಶ್ಯಕತೆ ಶಿಕ್ಷಣ ಸೌಲಭ್ಯಗಳು ದೊರೆಯಬೇಕು ಹಾಗಾಗಿ ನಮ್ಮ ಇಲಾಖೆ ವತಿಯಿಂದ ಹಾಗೂ ಸಂಘ ಸಂಸ್ಥೆಯ ವತಿಯಿಂದ ಸಂಪೂರ್ಣವಾಗಿ ಸಹಕಾರವನ್ನು ನೀಡುತ್ತೇವೆ ಎಂದು ತಿಳಿಸಿದರು.

ಬಿ.ಆರ್.ಸಿ.ನಂಜುಂಡಯ್ಯ ರವರು ಮಾತನಾಡಿ ವಿಕಲಚೇತನರ ಮಕ್ಕಳ ಜೊತೆ ಪೋಷಕರು ಒಂದಣಿಕೆಯಿಂದ ಇದ್ದರೆ ಮಕ್ಕಳಿಗೆ ಸೌಲಭ್ಯಗಳ ಜೊತೆ ಪ್ರಮಾಣ ಪತ್ರಗಳು ಹಾಗೂ ಗೌರವಗಳು ದೊರೆಯುವಂತಾಗುತ್ತದೆ, ಮಾರ್ಗವನ್ನು ಸೂಚಿಸುವಂತಹ ಮಾರ್ಗದರ್ಶಿ ಸಂಸ್ಥೆಯು ವಿಕಲಚೇತನರಿಗೆ ದಾರಿಯನ್ನು ತೋರಿಸುವಂತಹ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ, ಈ ನೆಲೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಕಲಿಕೆ ಗುಣಮಟ್ಟ ಯಾವ ರೀತಿ ವ್ಯಾಸಂಗ ಮಾಡಬೇಕು ಪರೀಕ್ಷೆಗೆ ತಯಾರು ಆಗುವುದು ಹೇಗೆ ಎಂಬ ಕುರಿತು ನಿಮ್ಮೆಲ್ಲರಿಗೂ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ. ಎಂ.ಮಂಜುನಾಥ್ ಮಾತನಾಡಿ ವಿಕಲಚೇತನ ಮಕ್ಕಳಲ್ಲಿ ಬಹಳಷ್ಟು ಪ್ರತಿಭಾವಂತ ಮಕ್ಕಳಿದ್ದಾರೆ ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ತಿಳುವಳಿಕೆ ಮೂಡಿಸಿದರೆ ಎಲ್ಲಾ ರಂಗದಲ್ಲಿ ಯಶಸ್ಸು ಸಾಧಿಸಲಿದ್ದಾರೆ, ಈ ನಿಟ್ಟಿನಲ್ಲಿ ಮಾರ್ಗದರ್ಶಿ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆ ಮಾಡುತ್ತಿರುವ ಸತ್ಕಾರ್ಯಗಳು ಯಶಸ್ವಿಯಾಗಲಿ, ವಿಕಲಚೇತನ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ವಿಶೇಷ ಅನುದಾನವನ್ನು ನೀಡುತ್ತಿದೆ.

ಹಾಗಾಗಿ ಶಿಕ್ಷಣವನ್ನು ಅರ್ಧಕ್ಕೆ ಮುಟಕುಗೊಳಿಸದೆ ಈ ಮಕ್ಕಳ ಶಿಕ್ಷಣ ಮಟ್ಟವನ್ನು ಸುಧಾರಿಸಲು ಕಾರ್ಯಗಾರವನ್ನು ನಡೆಸಿ, ಯಾವ ರೀತಿ ಪರೀಕ್ಷೆಗೆ ಸಿದ್ಧರಾಗಬೇಕು ಎಂಬುದನ್ನು ಸಂಪನ್ಮೂಲ ವ್ಯಕ್ತಿಗಳು ನಡೆಸಬೇಕು ವಿಕಲಚೇತನರ ಅಭಿವೃದ್ಧಿಗೆ ನಮ್ಮ ತಾಲೂಕಿನ ವತಿಯಿಂದ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಇಲಾಖೆ ವತಿಯಿಂದ ಸಹಕಾರವನ್ನು ನೀಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾರ್ಗದರ್ಶಿ ವಿಕಲಚೇತನ ಸಂಸ್ಥೆಯ ಜಿಲ್ಲಾಧ್ಯಕ್ಷರಾದ ರಾಜಣ್ಣ ಕೆ.ವಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೀರಭದ್ರ ಸ್ವಾಮಿ, ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಣ್ಣ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಕಾರ್ಯದರ್ಶಿ ಪ್ರಮೋದ್, ಇಸಿಓ ಕುಮಾರ, ಬಿಆರ್‌ಪಿ ನಂಜುಂಡಸ್ವಾಮಿ, BIERT ಮಧು ಕೆ. ಎಂ,ತಾಲ್ಲೂಕು ಸಂಯೋಜಕಿ ಮೇಘ,ದೊಡ್ಡತಾಯಮ್ಮ, ಕೋಮಲ, ಸವಿತಾ, ಪೋಷಕರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!