Ad imageAd image

ಪಕ್ಷ ಬಲವರ್ಧನೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರವರ ಪಾತ್ರ ಪ್ರಮುಖ : ಬಸನಗೌಡ ದದ್ದಲ್

Bharath Vaibhav
ಪಕ್ಷ ಬಲವರ್ಧನೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರವರ ಪಾತ್ರ ಪ್ರಮುಖ : ಬಸನಗೌಡ ದದ್ದಲ್
WhatsApp Group Join Now
Telegram Group Join Now

ರಾಯಚೂರು : ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ರವರು ಇಂದು ರೈತ ಭವನದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷ ಸಂಘಟನೆ ಮೂಲಕ ಪಕ್ಷ ಬಲವರ್ಧನೆಗೆ ಕಾಂಗ್ರೆಸ್ ಕಾರ್ಯಕರ್ತರ ಪಾತ್ರ ಅತ್ಯುನ್ನತವಾಗಿದೆ ಎಂದು ಶಾಸಕ ಬಸನಗೌಡ ದದ್ದಲ್ ರವರು ತಿಳಿಸಿದರು.

ಗಿಲ್ಲೆಸೂಗೂರು ಬ್ಲಾಕ್ ಅಧ್ಯಕ್ಷರಾಗಿ ನಾಗೇಂದ್ರಪ್ಪ ಮಟಮಾರಿ. ಮತ್ತು ದೇವಸುಗೂರು ಬ್ಲಾಕ್ ಅಧ್ಯಕ್ಷರನ್ನಾಗಿ ರಾಜಶೇಖರಂಗ ರವರನ್ನು ನೇಮಕ ಮಾಡಿದ್ದು ಅವರಿಗೆ ಸನ್ಮಾನ ಸಮಾರಂಭ ಮಾಡಲಾಯಿತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಪಂಪತಿಪತಿರವರು ನಾನು ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೆ ಅವರು ತಮ್ಮ ಕಾರ್ಯಗಳನ್ನು ಸ್ಥಗಿತಗೊಳಿಸಿ ನಾನು ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ನಾನು ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಎರಡನೇ ಬಾರಿ ಶಾಸಕನಾಗಿ ಆಯ್ಕೆಯಾಗಿರುವುದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮತ್ತುಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶ್ರಮವಿದೆ ಎಂದು ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಎ ವಸಂತ್ ಕುಮಾರ್. ಚಂದ್ರಶೇಖರ ಗೌಡ ಆಶಾಪೂರ್ ಮಲ್ಲಿಕಾರ್ಜುನ್ ಗೌಡ. ಪಂಪಾಪತಿ. ಸಿದ್ದನಗೌಡ ಗಾರಲದಿನ್ನಿ. ಮಾಸ್ ದೊಡ್ಡಿ ವೇಣುಗೋಪಾಲ್. ದೇವಸುಗೂರು ಕರಾಟೆ ನರಸಪ್ಪ.ಶ್ರೀನಿವಾಸ ರೆಡ್ಡಿ. ಶಿವಪ್ಪ ನಾಯಕ್. ತಿಮ್ಮಪ್ಪ ನಾಯಕ್. ನರಸಿಂಹ ನಾಯಕ್. ಬಂದ ನವಾಜ್. ಬಶೀರ್ ಸಾಬ್.ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

ವರದಿ : ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!