Ad imageAd image

ಪುರುಷನ ಸರ್ವಾಂಗೀಣ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ – ಶಾಸಕ ಎಸ್ ಮುನಿರಾಜು”

Bharath Vaibhav
ಪುರುಷನ ಸರ್ವಾಂಗೀಣ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ – ಶಾಸಕ ಎಸ್ ಮುನಿರಾಜು”
WhatsApp Group Join Now
Telegram Group Join Now

ಬೆಂಗಳೂರು: ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ದೇವತೆಯ ಸ್ವರೂಪಳು ತಾಯಿ -ತಾಯಿಯೇ ದೇವರಾಗಿ ಬಿಟ್ಟಳು -ಶಾಂತ ಸ್ವರೂಪಿ ಮಮತಾಮಯಿ ಕರುಣೆ ವಾತ್ಸಲ್ಯದ ಖಣಿ, ಜೀವನ ವೀಣೆಯ ತಂತಿ ಹೀಗೆ ಬದುಕ್ಕೇ ಸಾಕೆನಿಸುವಾಗ ನಮ್ಮ ಜೀವನದುದ್ದಕ್ಕೂ ಜೊತೆಯಾಗಿ ನಿಂತು ಹಿತವಾಗಿ ಬಾಳು ತೀಡುವ ಮಹಾ ಸ್ವರೂಪಿಯರು ನಮ್ಮ ಮಹಿಳೆಯರು ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಮುನಿರಾಜು ಹೇಳಿದರು.

ಅವರು ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮುಖಂಡ, ಸಮೃದ್ಧಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ದಿನೇಶ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸವಿತಾ ದಿನೇಶ್ ಅವರು ನೇತೃತ್ವದಲ್ಲಿ ಹಾಗೂ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳ ವಾಟರ್ ಮಾಜಿ ಅಧ್ಯಕ್ಷ ನಾಗೇಶ್, ಕಂಪ್ಯೂಟರ್ ವಿಜಯ ಕುಮಾರ್ ಇವರುಗಳ ಸಮ್ಮುಖದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಮೃದ್ಧಿ ಫೌಂಡೇಷನ್ ಉದ್ಘಾಟನೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ನಂತರ ತಾಯಿ ಸಂಸಾರದ ಭಾರವನ್ನೇಲ್ಲಾ ಹೊತ್ತು ಗಂಡ, ಮಕ್ಕಳಿಗಾಗಿ ತನ್ನ ಆಸೆ ಕನಸುಗಳನ್ನು ತ್ಯಾಗ ಮಾಡಿ ಕೆಟ್ಟ ಮಕ್ಕಳು ಜನಿಸಬಹುದು ಆದರೆ ಕೆಟ್ಟ ತಾಯಿ ಹುಟ್ಟಲಾರಳು ತಾಯಿದ್ದರೆ ಮಾತ್ರ ಬಂಧು ಬಳಗ ಎಲ್ಲಾ ಬಾಂಧವ್ಯಗಳ ಮುಖ್ಯ ಜೀವಾಳ ತಾಯಿ ಎಂದು ನೆನದ್ದಿದ ಜನರನ್ನು ಉದ್ದೇಶಿಸಿ ಶಾಸಕ ಎಸ್ ಮುನಿರಾಜು ಮಾತನಾಡಿದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿರಿಯ ನಾಯಕಿ ಹಾಗೂ ಶಾಸಕ ಧರ್ಮ ಪತ್ನಿ ಶ್ರೀಮತಿ ಸುಜಾತ ಮುನಿರಾಜು ಮಾತನಾಡಿ ಮಹಿಳೆಯರಾದವರು ನಾವು ಯಾವುದರಲ್ಲಿ ಕಡಿಮೆ ಇಲ್ಲಾ ಹೆಣ್ಣು ಜಗದ ಕಣ್ಣು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿದ್ದಾರೆ ನಮ್ಮ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರಮ ಮತ್ತು ದೇಶದ ಹಣಕಾಸು ಸಚಿವೆ ನಿರ್ಮಲ ಸೀತಾರಾಮ ಮಹಿಳೆಯರು ನಾವು ಘಂಟಾಘೋಷವಾಗಿ ಹೇಳಬೇಕು ಎಂದು ಮಹಿಳೆಯರಿಗೆ ಧೈರ್ಯ ತುಂಬಿ ಮಾತನಾಡಿದರು.
ಸಮೃದ್ಧಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ದಿನೇಶ್ ಸರ್ವರಿಗೂ ಸ್ವಾಗತಿಸಿದರು.

ಖ್ಯಾತ ಜಾನಪದ ಗಾಯಕ ಕುಣಿಗಲ್ ರಾಮಚಂದ್ರ ಕಾರ್ಯಕ್ರಮ ನಿರೂಪಣೆ ಮಾಡಿದರು.

ಈ ವೇಳೆ ಆಸಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪೌರಕಾರ್ಮಿಕರಿಗೆ ಮತ್ತು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಸಾಧಕಿಯರಿಗೆ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಗುರುನಿಕ್ಷಲ್, ರಕ್ಷಾಗುರುನಿಕ್ಷಲ್, ಮಾಜಿ ಉಪಮಹಾಪೌರ ಪದ್ಮಾವತಿ ನರಸಿಂಹಮೂರ್ತಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೋಹಿಣಿ, ಹರೀಶ್ ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
ವರದಿಗಾರರು: ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
Share This Article
error: Content is protected !!