ಸಿಂಧನೂರು : ಏಪ್ರಿಲ್ 15ರಂದು ನಗರದ ಸರ್ಕಿಟ್ ಹೌಸ್ ನಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕು ಸಮಿತಿ ವತಿಯಿಂದ ಮಹಾ ನಾಯಕ ವಿಶ್ವವಿಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ಸಂವಿಧಾನ ಉಳಿವಿಗಾಗಿ ಯುವಜನತೆಯ ಪಾತ್ರ ಎಂಬ ಶೀರ್ಷಿಕೆ ಅಡಿಯಲ್ಲಿ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದ್ದು ಹಿರಿಯ ಹೋರಾಟಗಾರ ಪಂಪಾಪತಿ ಬೂದಿಹಾಳ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾರಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ವಿಶೇಷ ಉಪನ್ಯಾಸಕರಾಗಿ ಚಿಂತಕ ನಾರಾಯಣ ಬೆಳಗುರ್ಕಿ ಹಾಗೂ ಮುಖಂಡರು ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿರುಪಾಕ್ಷಿ ಸಸಾಲಮಾರಿ ಅವರು ಅಂಬೇಡ್ಕರ್ ಅವರ ಜನ್ಮದಿನ ಪ್ರಯುಕ್ತ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು ಬಹಳ ಒಳ್ಳೆಯ ಕಾರ್ಯ ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಅವರು ಸರ್ವ ಜನಾಂಗದ ಸಮುದಾಯಕೋಸ್ಕರ ಅವರು ಸಂವಿಧಾನವನ್ನು ರಚಿಸಿದವರು ಇಂಥ ಒಂದು ಕಾರ್ಯಕ್ರಮಕ್ಕೆ ನಾನು ಉಪನ್ಯಾಸಕನಾಗಿ ಬಂದಿದ್ದು ನನ್ನ ಪುಣ್ಯ ನಮ್ಮ ನಮ್ಮಲ್ಲಿ ಭೇದ ಭಾವ ಮಾಡದೆ ನಾನು ಹೆಚ್ಚು ನೀನು ಹೆಚ್ಚು ಅನ್ನದೇ ನಾವೆಲ್ಲರೂ ಒಗ್ಗಟ್ಟಾಗಿ ಇರುವದರ ಜೊತೆಗೆ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಅರ್ಥೈಸಿಕೊಂಡು ಮುನ್ನಡೆಯಬೇಕಾಗಿದೆ ಹಾಗೂ ಸಂವಿಧಾನ ಉಳಿವಿಗಾಗಿ ಯುವ ಜನತೆಯ ಒಂದಾಗ ಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವಿರುಪಾಕ್ಷಿ ಸಾಸಲಮರಿ ಅಧ್ಯಕ್ಷರು ಕರ್ನಾಟಕ ದಲಿತ ರಕ್ಷಣಾ ವೇದಿಕೆ. ನಾರಾಯಣ ಬೆಳಗುರ್ಕಿ ಚಿಂತಕರು. ಮೌನೇಶ್ ಜಾಲವಾಡಗಿ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರು. ಶಿವರಾಜ್ ಸಸಾಲ್ಮರು. ದುರ್ಗೇಶ್ ಕಲ್ಮಂಗಿ. ನರಸಪ್ಪ ಬಡಿಗೇರ್. ಹೊನ್ನೂರ್ ಕಟ್ಟಿಮನಿ. ಮಲ್ಲಿಕಾರ್ಜುನ್ ಇನ್ನು ಅನೇಕರಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ