ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ನಿಂಗಾಪೂರ ಪೇಠದಲ್ಲಿರುವ ಮಹದೇವ ದೇವಸ್ಥಾನ ಹತ್ತಿರದಲ್ಲಿರುವ ವಾಮನರಾವ್ ಬಾಪೂ ಪವಾರ್ ವಯಸ್ಸು 75 ವಯಸ್ಸು ಉದ್ಯೋಗ ಕೂಲಿ ಕೆಲಸ ಮಾಡತಿದ್ದರು.
ಒಂದು ವಾರದಿಂದ ರಾಮದುರ್ಗ ಪಟ್ಟಣದಲ್ಲಿ ಮಳೆ ಸುರಿತಾ ಇದೆ ರಾಮದುರ್ಗ ನಿಂಗಾಪುರಪೇಟದಲ್ಲಿ ವಾಮನರಾವ್ ಬಾಪೂ ಪವಾರ್ ಮಣ್ಣಿನ ಮನೆಯಲ್ಲಿ ಮಲಗಿರುವಾಗ ಬೆಳಿಗ್ಗೆ 04ಘಂಟೆಗೆ ಮಣ್ಣಿನ ಮನೆ ಮಳೆ ನೀರಿಗೆ ನೆನದು ಮನೆಯ ಮೇಲ್ಚಾವಣಿ ಕುಸಿದು ಮೇಲೆ ಬಿದ್ದು ವಾಮನರಾವು ಮಣ್ಣಿನಲ್ಲಿ ಸಿಲುಕಿದ ಕಾರಣಕ್ಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ರಾಮದುರ್ಗ ಪೊಲೀಸ್ ಸಿಬ್ಬಂದಿ ಸೇರಿ ವಾಮನರಾವ್ ಬಾಪೂ ಪವಾರ್ ಅವರನ್ನು ಪತ್ತೆ ಮಾಡಿ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ ರಾಮದುರ್ಗ ಪೊಲೀಸ್ ಠಾಣಾ ಪಿಎಸ್ಐ ಶ್ರೀಮತಿ ಸವಿತಾ ಮುನ್ಯಾಳ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ವರದಿ: ಮಂಜುನಾಥ ಕಲಾದಗಿ




