ಬೆಳಗಾವಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಿಂದಾಗಿ ಇಂಧನ ಹಾಗೂ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ ಎಂಬ ವದಂತಿ ಹಬ್ಬುತ್ತಿದ್ದು, ವಾಹನಸವಾರರು ಗಾಬರಿಯಿಂದ ಪೆಟ್ರೋಲ್ ಬಂಕ್ ಗಳಿಗೆ ಮುಗಿಬೀಳುತ್ತಿದ್ದಾರೆ.
ಇಸ್ರೇಲ್, ಅಮೆರಿಕಾ, ಇರಾನ್ ಯುದ್ಧದ ಪರಿಣಾಮ ಎಲ್ ಪಿ ಜಿ, ಗ್ಯಾಸ್, ಪೇಟ್ರೋಲಿಯಂ ಉತ್ಪನ್ನಗಳು ಪೂರೈಕೆಯಲ್ಲಿ ವ್ಯತಯವಾಗುತ್ತಿದ್ದು, ಇಂದಿನಿಂದ ಪೆಟ್ರೋಲ್, ಡಿಸೆಲ್ ಸಿಗಲ್ಲ ಎಂಬ ವದಂತಿ ಹಬ್ಬುತ್ತಿದೆ. ಇದರಿಂದಾಗಿ ಜನರು ಆತಂಕಕ್ಕೀಡಾಗಿದ್ದಾರೆ.
ಈಗಾಗಲೇ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದು, ಪೆಟ್ರೋಲ್ ಡಿಸೇಲ್ ಕೂಡ ಸಿಗದಿದ್ದರೇ ಮುಂದೇನು? ಎಂಬ ಗೊಂದಲ ಸೃಷ್ಟಿಯಾಗಿದೆ. ಇದರಿಂದ ವಾಹನ ಸವಾರರು ಇಂಧನ ಹಾಕಿಸಿಕೊಳ್ಳಲು ಬಂಕ್ ಗಳಿಗೆ ಧಾವಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್, ಡಿಸೇಲ್ ಸಿಗೊದಿಲ್ಲ ಎಂಬ ಸಂದೇಶ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲೆಯಾಅಫ಼್ಯಂತ ಪೆಟ್ರೋಲ್ ಬಂಕ್ ಗಳಿಗೆ ಜನರು ದೌಡಾಯಿಸುತ್ತಿದ್ದು, ಬಂಕ್ ಸುತ್ತಮುತ್ತ ಜನಸಾಗರವೇ ನೆರೆದಿದೆ.
ಬೆಳಗಾವಿ ನಗರದ ಸದಾಶಿವ ನಗರ, ಅಜಮ್ ನಗರ, ವೈಭವ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ಸೇಠ್ ಪೆಟ್ರೋಲ್ ಬಂಕ್ ,ವೈಭವ ನಗರ, ಗಾಂಧಿ ನಗರ, ಚೆನ್ನಮ್ಮ ಸರ್ಕಲ್ ಹೀಗೆ ವಿವಿಧೆಗಳಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್ ಖರೀದಿಸುತ್ತಿದ್ದಾರೆ.
ನಾಲ್ಕೈದು ದಿನಗಳ ಕಾಲ ಪೆಟ್ರೋಲ್ ಸಿಗೊದಿಲ್ಲ ಎಂಬ ವ್ಯಾಟ್ಸಪ್ ಮೆಸೇಜ್ ವೈರಲ್ ಹಿನ್ನೆಲೆಯಲ್ಲಿ ಗೊಂದಲಕ್ಕೀಡಾಗಿರುವ ಜನರು ವಾಹನಗಳ ಜೊತೆಗೆ ವಾಟರ್ ಬಾಟಲ್, ಕ್ಯಾನ್ ಗಳಲ್ಲಿ ಕೂಡ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳುತ್ತಿದ್ದಾರೆ.




