ಹಾವೇರಿ ;ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಾದ್ಯಂತ ಪ್ರತಿ ಅಂಗಡಿಯಲ್ಲೂ ಸಾರಾಯಿ ಸಿಗುವಂತಾಗಿದೆ.
ದಾರಿಯುದ್ದಕ್ಕೂ ದಾರಿ ದೀಪದಂತೆ ತಲೆ ಎತ್ತಿವೆ ದಾರು ಅಂಗಡಿಗಳು. ನೂತನ ಶಾಸಕರಾಗಿ ಆಯ್ಕೆಯಾದ ಯಾಸಿರ್ ಅಹಮದ್ ಖಾನ್ ಪಠಾಣ್ ರವರು ಅದಿಕಾರ ವಹಿಸಿಕೊಂಡ ನಂತರ ಕಳ್ಳ ಸಾರಾಯಿ ನಿಷೇಧ ಮಾಡುವುದಾಗಿ ಹೇಳಿರುವುದು ಸತ್ಯವಾದರು ಕೂಡ ಆ ಮಾತು ಪಲಕಾರಿಯಾಗಿಲ್ಲ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಅಬಕಾರಿ ಇಲಾಖೆ ಅಂತೂ ಕೆಲಸಕ್ಕೆ ಬಾರದ ಇಲಾಖೆಯಾಗಿದೆ.
ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ. ಪ್ರತಿಷ್ಠಿತ ಧಾಭಾದ ಹೆಸರಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದೂ ಅಬಕಾರಿ ಅದಿಕಾರಿಗಳೆಂದರೆ ಧಾಭಾದ ಮಾಲೀಕರಿಗಿ ಭಯವಿಲ್ಲದಹಾಗೆ ಆಗಿದೆ. ಕಾರಣ ಇಷ್ಟೇ ಅಧಿಕಾರಿಗಳ ದುರಾಸೆ ಮತ್ತು ಸರ್ಕಾರಕ್ಕೆ ಟಾರ್ಗೆಟ್ ಕೊಡಬೇಕು ಎಂಬ ಮಾತು. ದಾರಿಯುದ್ದಕ್ಕೂ ಸಿಗುವ ಈ ಸಾರಾಯಿ ಮಾರಾಟದಿಂದ ರಸ್ತೆ ಅಪಘಾತಗಳು ಸಂಭವಿಸಿವೆ ಆದರೂ ಈ ವಿಷಯದ ಬಗ್ಗೆ ಗಂಭೀರತೆ ತೆಗೆದುಕೊಂಡಿಲ್ಲ. ಹೆಚ್ಚು ಹೆಚ್ಚು ಅಪಘಾತಗಳು ಸಂಭವಿಸಲು ಕಾರಣವಾಗುತ್ತಿದೆ ರಸ್ತೆಯುದಕ್ಕೂ ಸಿಗುವ ಈ ಸಾರಾಯಿ. ಅಬಕಾರಿ ಇಲಾಖೆ ಅಧಿಕಾರಿಗಳು ಇನ್ನು ಇದರ ಬಗ್ಗೆ ಗಮನ ಹರಿಸದಿದ್ದರೆ ಈ ಅಪಘಾತಕ್ಕೆ ನೀವು ಒಂದು ರೀತಿ ಕಾರಣರಾಗುತ್ತಿರೋ ಏನೋ..?
ನೂತನ ಶಾಸಕರಾಗಿರುವ ಯಾಸಿರ್ ಅಹಮದ್ ಖಾನ್ ಪಠಾಣ್ ರವರು ಕೂಡ ಈ ವಿಷಯದ ಬಗ್ಗೆ ಸ್ವಲ್ಪ ಗಮನ ಹರಿಸಿ ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ಪಾಲುದಾರರಾಗಿ.
ವರದಿ : ರಮೇಶ್ ತಾಳಿಕೋಟಿ