ಮುದಗಲ್ಲ : ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಅನಧಿಕೃತ ಡಬ್ಬಾ ಅಂಗಡಿಗಳು ರಾತ್ರಿ ಕಳೆದು ಬೆಳಗಾದರೆ ತಲೆ ಎತ್ತುತ್ತಲಿದ್ದು, ಸಂಚಾರಿ ವ್ಯವಸ್ಥೆಗೆ ತೀವ್ರ ತೊಂದರೆ ಒಡ್ಡುತ್ತಿವೆ ಆದರೆ ಈ ಡಬ್ಬಾ ಅಂಗಡಿಗಳ ಸ್ಥಿತಿ ಹಾಗಲ್ಲ. ಈ ಅಂಗಡಿಗಳನ್ನು ಯಾರೂ ಕಿಳದಂತೆ ಯೇ ಶಾಶ್ವತವಾಗಿ ತಳಪಾಯದಲ್ಲಿ ಸಿಮೆಂಟ್ ಹಾಕಿ, ಮೇಲೆ ಕಬ್ಬಿಣದ ಶಟರ್ ಹಾಕಿಯೇ ಸ್ಥಾಪಿಸ ಲಾಗುತ್ತದೆ.
ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ನಿಧಾನವಾಗಿ ಸ್ಥಾಪಿತವಾಗುವ ಈ ಅಂಗಡಿಗಳು ನಿಧಾನವಾಗಿ ಹಂತ ಹಂತವಾಗಿ ತಮ್ಮ ಅಸ್ತಿತ್ವನ್ನು ಹೆಚ್ಚಿಸಿಕೊಳ್ಳುತ್ತ ಹೊರಟಿರುವದು ಪಟ್ಟಣದ ಸೌಂದರ್ಯಕ್ಕೆ ಅಡಚಣೆಯಾಗುತ್ತಿದೆ. ಜೊತೆಗೆ ಸುಗಮ ಸಂಚಾರಕ್ಕೂ ತೊಂದರೆ ತಪ್ಪಿದ್ದಲ್ಲ ಎಂದು ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ ಆರೋಪ ಮಾಡಿದ್ದಾರೆ

ಪಟ್ಟಣದ ಬಾಗಲಕೋಟೆ ರಸ್ತೆ ಕೋಟೆ ಮೈದಾನ ಚೌಡಿ ಕಟ್ಟೆ ಹಾಗೂ APMC,ರಸ್ತೆ ಪಕ್ಕದಲ್ಲಿ ಕೆ ಇ ಬಿ ,ಆಫೀಸ್ ರಸ್ತೆ ಪಕ್ಕದಲ್ಲಿ ಮಸ್ಕಿ ಕ್ರಸ್ ದಿಂದ ಕೆರೆ ವರಗೆ, ಹಾಗೂ ಹೊರವಲಯದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರ ದ ವಸತಿ ಪಕ್ಕದ ಕಂಪೌಂಡ್ ಗೆ ಅಕ್ಕಪಕ್ಕದಲ್ಲಿ ಅನೇಕ ಡಬ್ಬಾ ಅಂಗಡಿಗಳು ಅಕ್ರಮವಾಗಿ ತಲೆ ಎತ್ತಿದ್ದು , ಡಬ್ಬಾ ಅಂಗಡಿ ಇಟ್ಟು ಬಾಡಿಗೆ ಪಡೆಯುತ್ತಿದ್ದಾರೆ ಎಂಬುದು ತಿಳಿದು ಬಂದಿದೆ
ರಸ್ತೆಗಳನ್ನು ಅತಿ ಕ್ರಮಿಸಿಕೊಂಡು ಕೆಲವರು ಡಬ್ಬಾಗಳನ್ನು ಹಾಕಿಸಿಕೊಂಡಿದ್ದಾರೆ ಆದರೆ ಯಾವುದೇ ಡಬ್ಬಾ ಅಂಗಡಿಗೆೆ ಪಟ್ಟಣ ಪುರಸಭೆ ವತಿಯಿಂದ ಪರವಾನಿಗೆಯನ್ನು ಪಡೆಯದೆ ಅಕ್ರಮವಾಗಿ ಆರಂಭಿಸಲಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ತೆರವುಗೊಳಿಸಲು ಮುಂದಾಗದಿರುವುದು ಸಂಶಯ ಮೂಡುವಂತೆ ಮಾಡಿದೆ ಎಂದು ದಲಿತ ಸಂಘರ್ಷ ಸಮಿತಿ ಯ ಲಿಂಗಸೂರು ತಾಲೂಕು ಅಧ್ಯಕ್ಷರು ಆರೋಪ ಮಾಡಿದರು..
ವರದಿ: ಮಂಜುನಾಥ ಕುಂಬಾರ




