ಚಿತ್ರದುರ್ಗದಲ್ಲಿ ಗುರುವಾರ ನಡೆಯುವ ಎಸ್ ಸಿ, ಎಸ್ ಟಿ,/ ಟಿ ಎಸ್ ಪಿ ಅನುದಾನ ಹಣವನ್ನು ಬೇರೆ ಯೋಜನೆಗಳಿಗೆ ಉಪಯೋಗಿಸಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಬೃಹತ್ ಪ್ರತಿಭಟನೆ.
ಮೊಳಕಾಲ್ಮೂರು:-ಗ್ಯಾರಂಟಿಗಳಿಗೆ ಹಣ ಹೊಂದಿಸಲು ಆಗದೆ ಬೇರೆ ಬೇರೆ ಇಲಾಖೆಗಳ ಅನುದಾನವನ್ನು ಬಳಕೆ ಮಾಡಿಕೊಂಡು ಖಜಾನೆ ಖಾಲಿ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಸುಮಾರು 16 ಬಾರಿ ಬಜೆಟ್ ಮಂಡಿಸಿದ್ದೇನೆ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದಿನ ಎಲ್ಲಾವನ್ನು ಕೈ ಚೆಲ್ಲಿ ಕುಳಿತುಕೊಂಡಿದ್ದಾರೆ ಎಂದು ನಿಕಟ ಪೂರ್ವ ಮಂಡಲ ಅಧ್ಯಕ್ಷರಾದ ಡಾಕ್ಟರ್ ಪಿ ಎಂ ಮಂಜುನಾಥ್ ರವರು ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವರ ಹಾಕಿದರು.
ಬಿಜೆಪಿ ಪಕ್ಷದ ವತಿಯಿಂದ ಗುರುವಾರ ಚಿತ್ರದುರ್ಗದಲ್ಲಿ ನಡೆಯುವ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಎರಡು ವರ್ಷಗಳಿಂದ ಎಸ್ಸಿ ಎಸ್ಟಿ ಹಣವನ್ನು ಶಾಲಾ ಮಕ್ಕಳ ಹಣವನ್ನು ಗಂಗಾ ಕಲ್ಯಾಣ ಯೋಜನೆಯ ಹಣವನ್ನು ಅನೇಕ ಅಭಿವೃದ್ಧಿ ಕೆಲಸಗಳ ಹಣವನ್ನು ನೇರ ಸಾಲ ಹೋಗುವಂತೆ ಹಣವನ್ನು ಹೀಗೆ ಹೇಳಿದರೆ ಸಾಲುಗಟ್ಟುತ್ತದೆ ಈ ಎಲ್ಲಾ ಹಣವನ್ನು ಬಿಟ್ಟು ಭಾಗಗಳಿಗೆ ಕೊಡುತ್ತಿರುವುದು ಎಸ್ಸಿ ಎಸ್ಟಿ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಮಂಡಲ ಅಧ್ಯಕ್ಷರಾದ ಶ್ರೀರಾಮ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಎಸ್ಸಿ ಎಸ್ಟಿ ಹಣವನ್ನು ಐದು ಗ್ಯಾರಂಟಿ ಗಳಿಗೆ ಹೋಗುತ್ತಿದೆ, ಹಿಂದುಳಿದ ಸಮಾಜವನ್ನು ಅಭಿವೃದ್ಧಿ ಮಾಡಬೇಕಾದ ಸರ್ಕಾರವು ಕಣ್ಮುಚ್ಚಿ ಕುಳಿತಿದೆ, ಇಂದ್ರ ಗಾಂಧಿ ಕಾಲದಿಂದಲೂ ಗರೀಬಿ ಹಟಾವೋ ಅನ್ನುವುದು ಘೋಷಣೆಗೆ ಮಾತ್ರ ಸೀಮಿತವಾಗಿದೆ, ಬಿಜೆಪಿ ಪಕ್ಷದಿಂದ ಅನೇಕ ಬಾರಿ ಎಚ್ಚರಿಸಿದ್ದಾರೆ ಯಾವುದೇ ಪ್ರಯೋಜನವಿಲ್ಲ ಆದರಿಂದ ತಾಲೂಕಿನಾದ್ಯಂತ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಈ ಭಾಗದ ಪ್ರತಿಯೊಂದು ಹಳ್ಳಿಯಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಯಾಗಿ ಮಾಡಬೇಕು ಎಂದು ತಿಳಿಸಿದರು.
ಅದೇ ರೀತಿ ಬಾಳ ಕಾಯಿ ರಾಮದಾಸ್ ಚಳ್ಳಕೆರೆ ಕುಮಾರಸ್ವಾಮಿ ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಂಕಲ್ ಬಸವರಾಜ್ ಎಂ ಪಿ ಪ್ರಭಾಕರ್ ಜೀರ್ಣ ತಿಪ್ಪೇಸ್ವಾಮಿ ಸಿದ್ದಾರ್ಥ್ ಕೆಬಿ ಮಹೇಶ್ ಹಾನಗಲ್ ತಿಪ್ಪಯ್ಯ ತುಮಕೂರ್ ಹಳ್ಳಿ, ಮಂಜುನಾಥ್, ರಾಜು ಮರಿಸ್ವಾಮಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಸದಸ್ಯರಾದ ಎಂ ಎನ್ ಮಂಜಣ್ಣ ಕಿರಣ್ ಗಾಯಕ್ವಾಡ್, ಇನ್ನು ಹಲವಾರು ಉಪಸ್ಥಿತರಿದ್ದರು.
ಪಿಎಂ ಗಂಗಾಧರ್




