Ad imageAd image

ಏರ್ ಪೋರ್ಟ್ ನಲ್ಲಿ ಬೀಡುಬಿಟ್ಟ ಎಸ್‌ಐಟಿ ತಂಡ : ನಾಳೆ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ವಶಕ್ಕೆ

Bharath Vaibhav
ಏರ್ ಪೋರ್ಟ್ ನಲ್ಲಿ ಬೀಡುಬಿಟ್ಟ ಎಸ್‌ಐಟಿ ತಂಡ : ನಾಳೆ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ವಶಕ್ಕೆ
prajwal revanna
WhatsApp Group Join Now
Telegram Group Join Now

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆಯಲು ಎಸ್ ಐಟಿ ಅಧಿಕಾರಿಗಳು ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಬೀಡುಬಿಟ್ಟಿದ್ದಾರೆ.

ನಾಳೆ ರಾತ್ರಿ 12 :30 ಕ್ಕೆ ಕೆಂಪೇಗೌಡ ಏರ್ ಪೋರ್ಟ್ ಗೆ ಜರ್ಮನಿಯಿಂದ ಪ್ರಜ್ವಲ್ ಬಂದಿಳಿಯಲಿದ್ದು, ಲುಫ್ತಾನ್ಸಾ ವಿಮಾನದಲ್ಲಿ ಪ್ರಜ್ವಲ್ ಲ್ಯಾಂಡ್ ಆಗಲಿದ್ದಾರೆ.ನಂತರ ಎಸ್ ಐ ಟಿ ಪ್ರಜ್ವಲ್ ರನ್ನು ವಶಕ್ಕೆ ಪಡೆಯಲಿದ್ದಾರೆ.

ಮೇ 31 ರಂದು ಬರುವುದಾಗಿ ಹೇಳಿರುವ ಪ್ರಜ್ವಲ್ ಮುಂಚಿತವಾಗಿಯೇ ಬರಬಹುದೆನೋ ಎಂದು ಏರ್ ಪೋರ್ಟ್ ನಲ್ಲಿ ಅಧಿಕಾರಿಗಳು ಠಿಕಾಣಿ ಹೂಡಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಅರೆಸ್ಟ್ ವಾರೆಂಟ್, ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಕಳೆದ 1 ತಿಂಗಳಿನಿಂದ ಏರ್ ಪೋರ್ಟ್ ನಲ್ಲಿ ಠಿಕಾಣಿ ಹೂಡಿರುವ ಎಸ್ ಐಟಿ ಅಧಿಕಾರಿಗಳು ಯಾವ ವಿಮಾನದಲ್ಲಿ ಬರ್ತಾನೆ ಎಂದು ಕಾದು ಕುಳಿತಿದ್ದಾರೆ.

ಮೇ.31 ರಂದು ಎಸ್ ಐ ಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.ವಿದೇಶದಲ್ಲಿ ವಿಡಿಯೋ ಮೂಲಕ ಹೇಳಿಕೆ ನೀಡಿದ ಪ್ರಜ್ವಲ್ ರೇವಣ್ಣ ‘ ನಾನು ನನ್ನ ತಂದೆ-ತಾಯಿ, ತಾತನ ಕ್ಷಮೆ ಕೇಳುತ್ತೇನೆ.

ವಿದೇಶದಕ್ಕೆ ಹೋದ 3 -4 ದಿನದ ಬಳಿಕ ಪ್ರಕರಣದ ಬಗ್ಗೆ ತಿಳಿಯಿತು. ಮೇ 31 ರಂದು ಬೆಳಗ್ಗೆ 10 ಗಂಟೆಗೆ ಎಸ್ ಐ ಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!