ಸೇಡಂ:-ಅಪಘಾತದಲ್ಲಿ ನರಳುತ್ತಿರುವ ರೋಗಿ.ಇದೇ ವೇಳೆ ವಾಸವದತ್ತಾ ರೈಲ್ವೆ ಗೇಟ್ ಬಂದ್.ಸಾವು ನೋವಿನ ಮಧ್ಯೆ ನರಳಾಟ, ಅಂಬುಲೆನ್ಸ್ ಬಂದರೂ ಕ್ಯಾರೆ ಎನ್ನದ ವಾಸವದತ್ತಾ ಕಾರ್ಖಾನೆ.ಸೇಡಂ ಹೃದಯಭಾಗದಿಂದ ವಾಸವದತ್ತಾ ಕಾರ್ಖಾನೆಗೆ ಹೋಗಿರುವ ರೈಲು ಹಳಿ.
ರೈಲು ತೆಗೆಸುವಂತೆ ಅಥವಾ ರೈಲು ಸಂಚಾರ ಬದಲಾಯಿಸುವಂತೆ ಒತ್ತಾಯಿಸಿ ಅನೇಕ ದಿನಗಳಿಂದ ಸೇಡಂ ಜನಹಿತ ರಕ್ಷಣಾ ಸಮಿತಿ ಪ್ರತಿಭಟಿಸಿದ್ದರೂ ಗಮನಹರಿಸದ ರೈಲ್ವೆ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು.
ಇದರಿಂದ ಸಾರ್ವಜನಿಕರ ಜೀವಕ್ಕೆ ಕುತ್ತು ತಂದ ಘಟನೆ ನಡೆದಿದೆ.ಬೋರಿಂಗ್ ಹೂಡಾ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ.ಆಸ್ಪತ್ರೆಗೆ ಸಾಗಿಸಬೇಕಾದರೆ ರೈಲು ಗೇಟ್ ಬಂದ್.

ರೊಚ್ಚಿಗೆದ್ದಿರುವ ಸಾರ್ವಜನಿಕರಿಂದ ಆಡಳಿತ ಅಧಿಕಾರಿಗಳು, ವಾಸವದತ್ತಾ ಕಾರ್ಖಾನೆ ಹಾಗೂ ಶಾಸಕ ಡಾ. ಶರಣಪ್ರಕಾಶ ಪಾಟೀಲ ಹಾಗೂ ಮಾಜಿ ಶಾಸಕ ರಾಜಕುಮಾರ ಪಾಟೀಲ ವಿರುದ್ಧ ಹಿಡಿಶಾಪ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.




