ಚಿತ್ರದುರ್ಗ : ಮದುವೆ ಮಾಡಲಿಲ್ಲ ಎಂದು ಪಾಪಿ ಮಗನೋರ್ವ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟದಲ್ಲಿ ನಡೆದಿದೆ.
ಸಣ್ಣ ನಿಂಗಪ್ಪ (65) ಕೊಲೆಯಾದ ದುರ್ದೈವಿ. ಮಗ ನಿಂಗರಾಜು ಈ ಕೃತ್ಯ ಎಸಗಿದ್ದಾನೆ. ಮದುವೆ ಮಾಡಲಿಲ್ಲ ಎಂದು ತಂದೆ ಸಣ್ಣ ನಿಂಗಪ್ಪ (65) ಜೊತೆ ಜಗಳ ಮಾಡಿದ್ದ ನಿಂಗರಾಜು ತಂದೆಯನ್ನೇ ಹತ್ಯೆ ಮಾಡಿದ್ದಾನೆ.ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ತಂದೆ ಸಣ್ಣ ನಿಂಗಪ್ಪ ಮಲಗಿದ್ದಾಗ ಪುತ್ರ ನಿಂಗರಾಜು ರಾಡ್ ನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾರೆ. ತಂದೆ-ಮಗನ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.




