ಮದ್ಯ ಪ್ರದೇಶ : ಇತ್ತೀಚೆಗೆ ಮಾನವೀಯತೆ ಅನ್ನೋದೆ ಮರೆಯಾಗುತ್ತಿದೆ. ತಂದೆ-ತಾಯಿ ಮೇಲೆ ಗೌರವ ಕಡಿಮೆಯಾಗುತ್ತದೆ. ಇಲ್ಲೊಬ್ಬ ಪಾಪಿ ಪುತ್ರ ಪ್ರವಾಸ ಹೋಗುವ ಸಲುವಾಗಿ ತನ್ನ 80 ವರ್ಷದ ಅಮ್ಮನನ್ನ ಕೂಡಿ ಹಾಕಿದ್ದಾನೆ.
ಮದ್ಯ ಪ್ರದೇಶದ ಭೋಪಾಲ್ ನಲ್ಲಿ ಮನೆಯನ್ನ ಲಾಕ್ ಮಾಡಿಕೊಂಡು ಪುತ್ರ ಹೋಗಿದ್ದಾನೆ.ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಅಮ್ಮ ಆಹಾರವಿಲ್ಲದೆ ಪರದಾಡಿದ್ದಾರೆ. ಮಂಚದ ಮೇಲೆ ಮಲಗಿದ್ದ ವೃದ್ಧ ಅಮ್ಮ ಊಟ-ತಿಂಡಿ ಇಲ್ಲದೆ ಪರದಾಡಿದ್ದಾರೆ. 24 ಗಂಟೆ ನೀರು ಸಹ ಕುಡಿಯದೆ ಇದ್ದದ್ದರಿಂದ ತಾಯಿ ಜೀವಬಿಟ್ಟಿದ್ದಾಳೆ.
ತಾಯಿಯ ಅಸಹಾಯ ಪರಿಸ್ಥಿತಿಗೆ ಸ್ಪಂದಿಸದ ಪುತ್ರನನ್ನ ಕರೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೃತ ವೃದ್ಧೆಯ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.