ನಾಗ್ಪುರ : ನಾಗ್ಪುರದಲ್ಲಿ ಪಾಪಿ ಮಗ ಕ್ಷುಲ್ಲಕ ಕಾರಣಕ್ಕೆ ಹೆತ್ತಮ್ಮ ಹಾಗೂ ಅಪ್ಪನನ್ನ ಕೊಲೆಗೈದಿದ್ದಾನೆ. ಡಿಸೆಂಬರ್ 26 ರಂದು ಹತ್ಯೆ ನಡೆದಿದ್ದು, ಜ.2ರಂದು ಪ್ರಕರಣ ಬೆಳಕಿಗೆ ಬಂದಿದೆ.
ಇಂಜಿನಿಯರಿಂಗ್ ಎಕ್ಸಾಂ ಫೇಲ್ ಆಗಿದ್ದ ಉತ್ಕರ್ಶ್ ದಾಕೋಲೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೀಲಾದ್ಕರ್ ದಾಕೋಲೆ ಹಾಗೂ ಅರುಣಾ ದಾಕೋಲೆ ಕೊಲೆಯಾದ ಮೃತ ದುರ್ದೈವಿ.
ಆರೋಪಿ ಉತ್ಕರ್ಶ್ ಗೆ ಚೆನ್ನಾಗಿ ಓದುವಂತೆ ಪೋಷಕರು ಒತ್ತಾಯ ಹೇರಿದ್ದರು. ಓದುತ್ತಿರುವ ಕಾಲೇಜು ಬದಲಾವಣೆ ಮಾಡುವಂತೆ ಸೂಚಿಸಿದ್ದರು. ಇದರಿಂದ ಕೋಪಗೊಂಡಿದ್ದ ಉತ್ಕರ್ಶ್ ಚಾಕುವಿನಿಂದ ಇರಿದು ಅಪ್ಪ ಹಾಗೂ ಅಮ್ಮನನ್ನು ಹತ್ಯೆ ಮಾಡಿದ್ದಾನೆ.