ಚಿಟಗುಪ್ಪ ;ತಾಲ್ಲೂಕಿನ ಮನ್ನಾಏಖೇಳ್ಳಿ ಗ್ರಾಮದಲ್ಲಿ ಮತ್ತೆ ಬೊಲ್ಡೋಜರ್ ಶಬ್ದ ಮಾಡಿದೆ.
ಈ ಹಿಂದೆ ಮನ್ನಾಏಖೇಳ್ಳಿ ಸಮುದಾಯದ ಆರೋಗ್ಯ ಕೇಂದ್ರದ ಎದರುಗಡೆ ಅನಾದಿಕೃತವಾಗಿ ನಿರ್ಮಿಸಿದ ಅಂಗಡಿಗಳನ್ನು ಗ್ರಾಮ ಪಂಚಾಯತ ವತಿಯಿಂದ ಬೊಲ್ಡೋಜರ್ ಮೂಲಕ ತೆರವುಗೊಳಿಸಲಾಗಿತ್ತು.
ಸದ್ಯ ಅದೆ ಸ್ಥಳಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಮುದಾಯದ ಸಂಕಿರ್ಣ ಮಳಿಗೆಗಳು ನಿರ್ಮಿಸಲಾಗುತ್ತಿದೆ.

ಹೀಗಾಗಿ ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಶುಕ್ರವಾರ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶುಭ ಹಾರೈಸಿದರು.
ಬಳಿಕ ಸಾತೆ ಸಾತ್ ಬೊಲ್ಡೋಜರ್ ಮೂಲಕ ಕಾಮಗಾರಿ ಪ್ರಾರಂಭಿಸಲಾಯಿತು.ಇದನ್ನು ಗಮನಿಸಿದ ಗ್ರಾಮಸ್ಥರು ಬೊಲ್ಡೋಜರ್ ಮತ್ತೆ ಶಬ್ದ ಮಾಡಿದೆ ಎಂದು ಮಾತನಾಡಿ ಕೊಳ್ಳುತ್ತಿರುವದು ಕಂಡು ಬಂದಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಾಜಕುಮಾರ ಅಗಸಿ,ಪಿಡಿಒ ಭಾಗ್ಯ ಜ್ಯೋತಿ, ಸದಸ್ಯರಾದ ಜಾವಿದ್ ಜಮಾದಾರ,ಸಂತೋಷ ಹಳ್ಳಖೇಡ,ಪ್ರಮುಖರಾದ ಯೂಸುಫ್ ಅಲಿ ಜಮಾದಾರ,ಪಂಡಿತ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು,ಸಿಬ್ಬಂದಿಗಳು,ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ವರದಿ :ಸಜೀಶ ಲಂಬುನೋರ್




