Ad imageAd image

545 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆದೇಶಕ್ಕೆ ರಾಜ್ಯ ಸರ್ಕಾರ ತಡೆ

Bharath Vaibhav
545 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆದೇಶಕ್ಕೆ ರಾಜ್ಯ ಸರ್ಕಾರ ತಡೆ
vidhan soudha
WhatsApp Group Join Now
Telegram Group Join Now

ಬೆಂಗಳೂರು : 545 ಪಿ.ಎಸ್.ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿ/ನೇಮಕಾತಿ ಆದೇಶಗಳನ್ನು ಪ್ರಕಟಿಸದೇ ತಡೆ ಹಿಡಿಯುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ 545 ಪಿ.ಎಸ್.ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಯ ಅಧಿಸೂಚನೆಯು ದಿನಾಂಕ: 21.01.2021ರಂದು ಹೊರಡಿಸಲ್ಪಟ್ಟಿದ್ದು ಪರಿಶೀಲನೆಯಲ್ಲಿರುವ ದಿನಾಂಕ: 01.02.2023ರ ಸರ್ಕಾರದ ಸುತ್ತೋಲೆಗಿಂತ 2 ವರ್ಷಗಳಷ್ಟು ಮೊದಲೇ ಅಧಿಸೂಚನೆಗೊಂಡಿರುತ್ತದೆ ಪ್ರಸ್ತುತ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ ದಿನಾಂಕ: 01.02.2023ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆಯ ಸಿಂಧುತ್ವದ ಸಂಬಂಧ ದಾಖಲಾಗಿರುವ ಅರ್ಜಿ ಸಂಖ್ಯೆ: 1970/2023, ದಿನಾಂಕ: 01.01.2024ರ ತೀರ್ಪಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ದಿನಾಂಕ: 01-02-2023ರ ಸುತ್ತೋಲೆಯನ್ನು ರದ್ದುಪಡಿಸಲಾಗಿದೆ.

ಸದರಿ ತೀರ್ಪಿನ ವಿರುದ್ಧ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ರಿಟ್ ಅರ್ಜಿ ಸಂಖ್ಯೆ: 16343/2024ರಲ್ಲಿ ನೀಡುವ ತೀರ್ಪಿಗೊಳಪಟ್ಟು ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆ ಸಂಖ್ಯೆ: ಸಿಆಸುಇ 03 ಹೈಕ 2018, ದಿನಾಂಕ: 06.06.2020 ರನ್ನಯ ಕ್ರಮವಹಿಸುವಂತೆ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರಿಗೆ ತಿಳಿಸಲಾಗಿರುತ್ತದೆ.

ಆದರೆ, ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳು ಪಾಲಿಸಬೇಕಾದ ವಿಧಿ-ವಿಧಾನಗಳ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೊರಡಿಸಿರುವ ವಿವಿಧ ಸುತ್ತೋಲೆಗಳಲ್ಲಿ ಗೊಂದಲಗಳಿರುತ್ತದೆ ಮತ್ತು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಸಹ ಬಾಕಿ ಇರುತ್ತದೆ. ಈ ಸಂಬಂಧದ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ದಿನಾಂಕ: 27.09.2024ರಂದು ಸಚಿವ ಸಂಪುಟದ 371(ಜೆ) ಉಪ ಸಮಿತಿ ಸಭೆಯನ್ನು ಕರೆಯಲಾಗಿದೆ.

ಆದ್ದರಿಂದ ದಿನಾಂಕ 27.09.2024ರವರೆಗೆ 545 (A) ನೇಮಕಾತಿಗೆ ಸಂಬಂಧಿಸಿದ ಆಯ್ಕೆ ಪಟ್ಟಿ/ನೇಮಕಾತಿ ಆದೇಶಗಳನ್ನು ಪ್ರಕಟಿಸದೇ ತಡೆ ಹಿಡಿಯಲು ಕೋರಿದೆ.

 

 

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!