———————–ಸಮವಸ್ತçದಲ್ಲೇ ಮಹಿಳೆಯೊಂದಿಗೆ ‘ರಾಸಲೀಲೆ’ ಪ್ರಕರಣ
ಬೆಂಗಳೂರು: ಕಚೇರಿಯಲ್ಲೇ ಮಹಿಳೆಯೊಂದಿಗೆ ‘ರಾಸಲೀಲೆ’ ನಡೆಸಿದ್ದಾರೆನ್ನಲಾದ ವಿಡಿಯೋ ಡಿಜಿಪಿ ರಾಮಚಂದ್ರರಾವ್À ವಿರುದ್ಧ ಬಯಲಾದ ಬೆನ್ನಲ್ಲೆ ರಾಮಚಂದ್ರರಾವ್ ಮತ್ತೊಂದು ವಿವಾದ ಆರೋಪಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾತೋರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ರಾಮಚಂದ್ರರಾವ್ ಅವರನ್ನು ಅಮಾನತು ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಆರೋಪ ಕುರಿತು ತನಿಖೆ ನಡೆಯಬೇಕಾಗಿರುವುದರಿಂದ ರಾಜ್ಯ ಸರಕಾರ ಅಮಾನತು ಆದೇಶ ಮಾತ್ರ ಹೊರಡಿಸಿದ್ದು, ತನಿಖೆ ಮುಗಿದ ನಂತರ ತಪ್ಪಿತಸ್ಥರೆಂದು ಕಂಡು ಬಂದರೆ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಹೇಳಿದೆ.
ವಿಡಿಯೋ ಸುಳ್ಳು ಎಂದು ರಾಮಚಂದ್ರರಾವ್ ಹೇಳಿಕೊಂಡಿದ್ದು, ಆ ಎಲ್ಲ ವಿಷಯವನ್ನು ತನಿಖೆ ನಂತರ ನೋಡೋಣ. ಈಗ ಮೇಲ್ನೋಟಕ್ಕೆ ರಾಸಲೀಲೆ ಕೃತ್ಯ ಕಂಡು ಬಂದಿದ್ದು, ಕ್ರಮ ವಹಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಡಿಜಿಪಿ ರಾಮಚಂದ್ರರಾವ್ ಅಮಾನತುಗೊಳಿಸಿ ರಾಜ್ಯ ಸರಕಾರ ಆದೇಶ




