ಬೆಳಗಾವಿ: ಕರ್ನಾಟಕ-ಗೋವಾ ಗಡಿಯ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ ದೇಶದ ಅತಿದೊಡ್ಡ 400 ಕೋಟಿ ರೂಪಾಯಿ ದರೋಡೆ ಪ್ರಕರಣವು ಈಗ ಹೊಸ ತಿರುವು ಪಡೆದಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿಶೇಷ ತನಿಖಾ ತಂಡ (SIT) ಮಹತ್ವದ ವರದಿಯನ್ನು ಸಿದ್ಧಪಡಿಸಿದ್ದು, ಪ್ರಕರಣದ ಹಿಂದಿರುವ ‘ಕಳ್ಳ-ಪೊಲೀಸ್’ ಆಟ ಬಯಲಾಗುತ್ತಿದೆ.
ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಭಾಗವಾದ ಚೋರ್ಲಾ ಘಾಟ್‌ನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂಪಾಯಿ ದರೋಡೆ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ.
ಕರ್ನಾಟಕ-ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಆಗಿದೇ ಎಂಬುದು ಸುಳ್ಳು ವರದಿ ಎಂಬುದು ಎಸ್ ಐಟಿ ತನಿಖೆಯಲ್ಲಿ ಧೃಡವಾಗಿದೆ. ಈ ವರದಿಯನ್ನು ಎಸ್ ಐ ಟಿ ಮಹಾರಾಷ್ಟ್ರ ಸರ್ಕಾರಕ್ಕೆ ಸಲ್ಲಿಸಿದೆ. ಇದೊಂದು ಕಟ್ಟು ಕಥೆ ಎಂದು ಸ್ಪಷ್ಟಪಡಿಸಿದೆ.
ನಾಸಿಕ್ ಮೂಲದ ಉದ್ಯಮಿ ಸಂದೀಪ್ ಪಾಟೀಲ್ ಎಂಬುವವರು, “ಗೋವಾದಿಂದ ಮಹಾರಾಷ್ಟ್ರಕ್ಕೆ ಎರಡು ಕಂಟೇನರ್‌ಗಳಲ್ಲಿ ಸಾಗಿಸುತ್ತಿದ್ದ 400 ಕೋಟಿ ರೂಪಾಯಿ (ರದ್ದಾದ 2000 ಮುಖಬೆಲೆಯ ನೋಟುಗಳು) ಹಣವನ್ನು ಚೋರ್ರ್ಲಾ ಘಾಟ್ ಬಳಿ ದರೋಡೆ ಮಾಡಲಾಗಿದೆ” ಎಂದು ದೂರು ನೀಡಿದ್ದರು. ಕರ್ನಾಟಕ ಅಥವಾ ಗೋವಾ ಗಡಿಯಲ್ಲಿ ಯಾವುದೇ 400 ಕೋಟಿ ಲೂಟಿ ಆಗಿಲ್ಲ ಎಂದು SIT ಸ್ಪಷ್ಟಪಡಿಸಿದೆ.
SIT ತನಿಖೆಯಲ್ಲಿ ಬಯಲಾದ ಸತ್ಯ: ಮಹಾರಾಷ್ಟ್ರ ಪೊಲೀಸರ ಎಸ್‌ಐಟಿ ತಂಡವು ತನಿಖೆ ನಡೆಸಿದಾಗ, ದೂರುದಾರ ನೀಡಿದ ಸ್ಥಳ ಮತ್ತು ಸಮಯಕ್ಕೂ ವಾಸ್ತವಕ್ಕೂ ಸಂಬಂಧವೇ ಇಲ್ಲ ಎಂಬುದು ದೃಢಪಟ್ಟಿದೆ. ಆ ಸಮಯದಲ್ಲಿ ಅಂತಹ ಯಾವುದೇ ಕಂಟೇನರ್ ಚೋರ್ರ್ಲಾ ಘಾಟ್‌ನಲ್ಲಿ ಸಂಚರಿಸಿಲ್ಲ ಎಂಬುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ.
ಏನಿದು ಪ್ರಕರಣ?
ನಾಸಿಕ್ ಮೂಲದ ಉದ್ಯಮಿ ಸಂದೀಪ್ ಪಾಟೀಲ್ ಎಂಬುವವರು ನೀಡಿದ ದೂರಿನ ಪ್ರಕಾರ, ಗೋವಾದಿಂದ ಮಹಾರಾಷ್ಟ್ರಕ್ಕೆ ಎರಡು ಕಂಟೇನರ್‌ಗಳಲ್ಲಿ ಸಾಗಿಸುತ್ತಿದ್ದ 400 ಕೋಟಿ ರೂಪಾಯಿ (ಹಳೆಯ 2000 ಮುಖಬೆಲೆಯ ನೋಟುಗಳು) ಹಣವನ್ನು ಚೋರ್ಲಾ ಘಾಟ್ ಬಳಿ ಕಿಡಿಗೇಡಿಗಳು ಹೈಜಾಕ್ ಮಾಡಿದ್ದರು. ಈ ಹಣವು ಮುಂಬೈನ ಪ್ರಭಾವಿ ಬಿಲ್ಡರ್ ಒಬ್ಬರಿಗೆ ಸೇರಿದ್ದು ಎಂಬ ಮಾತುಗಳು ಕೇಳಿಬಂದಿದ್ದವು.
ದೂರುದಾರ ಸಂದೀಪ್ ಪಾಟೀಲ್ ನೀಡಿದ ಹೇಳಿಕೆಗಳು ಮತ್ತು ಸ್ಥಳೀಯ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾದ ಪುರಾವೆಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಕಂಡುಬಂದಿತ್ತು.
ಮಹಾರಾಷ್ಟ್ರ ಸರ್ಕಾರ ರಚಿಸಿದ ವಿಶೇಷ ತನಿಖಾ ದಳ (SIT) ನಡೆಸಿದ ತನಿಖೆಯಲ್ಲಿ, ಈ ದರೋಡೆಯ ದೂರಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಇದು ಯೋಜಿತ ಪಿತೂರಿ ಎಂಬ ಮಾಹಿತಿ ಹೊರಬರುತ್ತಿದೆ.




