ಭಾಲ್ಕಿ: ಸರ್ಕಾರದ ಮುಂದಿರುವ ಪೌರಕಾರ್ಮಿಕರ ನ್ಯಾಯ ಸಮ್ಮತವಾದ ಬೇಡಿಕೆಗಳು ಈಡೇರುವವರೆಗೆ ನಮ್ಮ ಮುಷ್ಕರ ನಿಲ್ಲಲ್ಲ ಎಂದು ಕರ್ನಾಟಕ ರಾಜ್ಯ ಪೌರಕಾರ್ಮಿಕ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಅವಿನಾಶ ಗಾಯಕವಾಡ ಹೇಳಿದರು.
ಪಟ್ಟಣದ ಪುರಸಭೆಯ ಮುಂಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಅವರು ಮಾತನಾಡಿದರು. ಪೌರಕಾರ್ಮಿಕರು ಈ ಹಿಂದೆ ಹಲವಾರು ಬಾರಿ ಮುಷ್ಕರ ನಡೆಸಿದರೂ ಸರ್ಕಾರ ನಮ್ಮ ಬೇಡಿಕೆಗಳು ಈಡೇರಿಸಿಲ್ಲ.
ಹೀಗಾಗಿ ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸಿ ಇಂದು ಮುಷ್ಕರ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೆ ನಮ್ಮ ಮುಷ್ಕರ ನಿಲ್ಲಲ್ಲ. ನಮ್ಮ ಪ್ರಮುಖ ಬೇಡಿಕೆಗಳಾದ ಪೌರ ಕಾರ್ಮಿಕರಿಗೆ ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜಿವಿನಿ, ಕೆಜಿಐಡಿ ಸೇರಿಂದತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಇಲ್ಲದಿದ್ದರೆ ಪಟ್ಟಣದ ಎಲ್ಲಾ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರ ಮುಂದು ವರೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ, ವಿಶ್ವನಾಥ, ಬಾಲಾಜಿ ಕಂದಾಯ, ಸುಶೀಲ ಕುಮಾರ, ವಿಯಕುಮಾರ, ವಿದ್ಯಾವತಿ, ಶ್ರೀದೇವಿ, ಉತ್ತಮ್ಮಾ, ಸಂತೋಷ ಪಾಂಚಾಳ, ಧನಾಜಿ ಸೂರ್ಯವಂಶಿ, ಜಯಶ್ರೀ, ಶಕುಂತಲಾ, ಚಂದ್ರಕಲಾ, ಮಂಗಲಾಬಾಯಿ, ಉತ್ತಮಬಾಯಿ ಸೇರಿದಂತೆ ಹಲವರು ಇದ್ದರು.
ವರದಿ : ಸಂತೋಷ ಬಿಜಿ ಪಾಟೀಲ್




