ಸೇಡಂ : ತಾಲೂಕಿನ ದುಗುನೂರ ಗ್ರಾಮದಲ್ಲಿ ಹೆಸರಿಗೆ ಅಷ್ಟೇ ಜಲ ಜೀವನ ಯೋಜನೆ ಆದರೆ ಇಲ್ಲಿ ನಡೆಯುತ್ತಿರುವುದು ಬೇರೆ.
ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರಕಾರವು ಮನೆ ಮನೆಗೆ ನೀರು ತಲುಪಲಿ ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ಮಾಡಲಾಗಿದೆ. ಅದರೆ ಸೇಡಂ ತಾಲೂಕಿನ ಕೆಲ ಗ್ರಾಮಗಳಲ್ಲಿ ಇಷ್ಟ ಬಂದಹಾಗೆ ಕೆಲಸ ಮಾಡುತ್ತಾರೆ ಮತ್ತೆ ನಿಲ್ಲಿಸುತ್ತಾರೆ.
ದುಗನೂರ ಗ್ರಾಮದಲ್ಲಿ ಈ ಕಾಮಗಾರಿ ಸಂಪೂರ್ಣವಾಗದೆ ಇರುವುದರಿಂದ ಗ್ರಾಮದ ತುಂಬಾ ರಸ್ತೆಗಳು ತೊಡಿ ಕೆಲಸ ಪೂರ್ತಿಯಾಗದೆ ಸಾರ್ವಜನಿಕರಿಗೆ ಅನೇಕ ತೊಂದರೆಗಳಿಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಈ ಹಿಂದೆ ಗ್ರಾಮ ಪಂಚಾಯತ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು ಸಂಬಂಧಿಸಿದ ಸಮಸ್ಯೆಗಾಗಿ ತಾಲೂಕ ಪಂಚಾಯತ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಹೋಗಿದ್ದರು ಮತ್ತು ಕಳೆದ ಕೆಲ ದಿನಗಳ ಹಿಂದೆ ಸ್ಥಳೀಯ ಶಾಸಕರು ಹಾಗೂ ಸಚಿವರಾದ ಡಾಕ್ಟರ್ ಶರಣಪ್ರಕಾಶ್ ಪಾಟೀಲ್ ಅವರು ಗ್ರಾಮಕ್ಕೆ ಭೇಟಿ ನೀಡಿದರು.
ಕೆಲಸ ಪೂರ್ತಿ ಆಗಿದೆಯಾ ಇಲ್ಲವೇ ಎಂಬುದು ನಿಮ್ಮ ದೃಷ್ಟಿಗೆ ಬಂದಿಲ್ಲವೇ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಶಾಸಕರು ಬೇಟಿ ನೀಡಿದರೂ ಯಾವುದೇ ಕೆಲಸ ಪ್ರಾರಂಭವಾಗಲಿಲ್ಲ ಅದಿಕಾರಿಗಳು ಬೇಟಿ ನೀಡಿದರು ಕೆಲಸ ಪ್ರಾರಂಭವಾಗಲಿಲ್ಲ ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ನಮಗೆ ತಿಳಿಯಬೇಕಿದೆ ಎಂದು ಸ್ಥಳೀಯ ಯುವಕರು ಆಕ್ರೋಶ ವ್ಯಕ್ತಪಡಿಸಿದರು.
ಬಿಲ್ ಹಣ ತಿಂದು ಪರಾರಿಯಾಗಿದ್ದಾರೆ ಎಂಬ ಅನುಮಾನಗಳು ಸಹ ಮೂಡಿಬರುತ್ತಿವೆ.
ಕೂಡಲೇ ಕ್ರಮ ಕೈಗೊಂಡು ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಯುವಕರು ಸಚಿನ್ ದುಗುನೂರ್, ಶ್ರೀಕಾಂತ್ ರೆಡ್ಡಿ, ರಾಜು ಅಂಬರೀಶ್ ನಂಗಿ, ತೋಟೆಂದ್ರ ಕಾವಲ್, ರಾಜು, ದೇವರಾಜ್ ಮತ್ತು ಗ್ರಾಮಸ್ಥರು ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




