ಅಥಣಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಜ್ಯೋತಿ ಅಥಣಿಗೆ ಆಗಮಿಸುತ್ತಿದ್ದಂತೆ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಜ್ಯೋತಿಗೆ ಪೂಜೆ ಸಲ್ಲಿಸಿ ವಾದ್ಯಮೇಳ, ಕುಂಭಮೇಳದೊಂದಿಗೆ ಅಂಬೇಡ್ಕರ್ ವೃತ್ತದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಹಾಯ್ದು ಶಿವಯೋಗಿ ವೃತ್ತದಲ್ಲಿ ರಾಯಬಾಗ ತಾಲೂಕಿಗೆ ಬಿಳ್ಕೊಡುಗೆ ನೀಡಿದರು.
ಈ ವೇಳೆ ಅಥಣಿ ತಹಸಿಲ್ದಾರ್ ಸಿದ್ದರಾಯ್ ಬೋಸ್ಗಿ ಯುವ ಮುಖಂಡ ಚಿದಾನಂದ ಸವದಿ ಅಥಣಿ ಪುರಸಭಾ ಅಧ್ಯಕ್ಷರಾದ ಶಿವಲೀಲಾ ಬುಟ್ಟಾಳೆ ಉಪಾಧ್ಯಕ್ಷರಾದ ಭುವನೇಶ್ವರಿ ಯಂಕಂಚಿ ಅಧಿಕಾರಿಗಳಾದ ಅಶೋಕ ಗುಡಿಮನಿ ಮಂಜುನಾಥ್ ಸೌಂದರ್ಗಾಕರ್ ತಾಲೂಕಾ ಅಧಿಕಾರಿಗಳು ತಾಲೂಕಾ ಕರವೇ ಅಧ್ಯಕ್ಷ ಉದಯ ಮಾಕಾಣಿ ಅಣ್ಣ ಸಾಹೇಬ್ ತೆಲಸಂಗ ಜಗನ್ನಾಥ್ ಬಾಮಣಿ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಸಮಾಜದ ಹಿರಿಯರು ಪಾಲ್ಗೊಂಡಿದ್ದರು
ವರದಿ : ಸುಕುಮಾರ ಮಾದರ




