ಬೆಳಗಾವಿ : ಬೆಳಗಾವಿಯಲ್ಲಿ ಕುಡಿದ ಮತ್ತಿನಲ್ಲಿ ಅನ್ಯಕೋಮಿನ ಯುವಕನೊಬ್ಬ ದೇವಸ್ಥಾನದ ಮೇಲೆ ಕಲ್ಲೆಸೆದಿರುವ ಘಟನೆ ನಡೆದಿದೆ. ಬೆಳಗಾವಿ ನಗರದ ಪಾಂಗುಳಗಲ್ಲಿಯಲ್ಲಿರುವ ಅಶ್ವತ್ಮಾಮ ದೇವಸ್ಥಾನದ ಮೇಲೆ ಅನ್ಯಕೋಮಿನ ಯುವಕ ಕಲ್ಲೆಸೆದು ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ.
ದೇವಸ್ಥಾನದ ಮೇಲೆ ಕಲ್ಪಿಸದ ವ್ಯಕ್ತಿಯನ್ನು ಉಜ್ವಲ್ ನಗರದ ಯಾಸಿರ್ ಎಂದು ಗುರುತಿಸಲಾಗಿದೆ. ಯಾಕೆ ಕಲ್ಲು ತೂರಾಟ ನಡೆಸುತ್ತಿದ್ದೀಯಾ ಎಂದು ಪ್ರಶ್ನಿಸುತ್ತಿದ್ದಂತೆ ತಪ್ಪಾಯ್ತು ಬಿಟ್ಟು ಬಿಡಿ ಎಂದಿದ್ದಾನೆ. ಅಲ್ಲದೇ ಈ ಹಿಂದೆ ವ್ಯಕ್ತಿಯೊಬ್ಬ ಬುರ್ಖಾ ಧರಿಸ್ ಡ್ಯಾನ್ಸ್ ಮಡಿದ ಹೀಗಾಗಿ ನಾನು ಕಲ್ಲೆಸೆದಿದ್ದಾನೆ ಎಂದು ಹೇಳಿದ್ದಾನೆ.
ಸದ್ಯ ಕಿಸೆದ ಆರೋಪಿ ಯಾಸಿರ್ ನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.