ವಿಜಯಪುರ: ತಡರಾತ್ರಿ ಸಿ.ಪಿ.ಐ ಡ್ರೈವರ್ ಕಮ್ ಪೊಲೀಸ್ ಪೇದೆಗೆ ಕಳ್ಳರು ಚಾಕು ಇರಿದು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪಟ್ಟಣದಲ್ಲಿ ಘಟನೆ ನಡೆದಿದೆ.

ಸಿ.ಪಿ.ಐ ಡ್ರೈವರ್ ಕಮ್ ಪೊಲೀಸ್ ಪೇದೆ ರಮೇಶ ಗೂಳಿ ಇವರಿಗೆ ಕಳ್ಳರು ತೊಡೆ ಹಾಗೂ ಇನ್ನಿತರ ದೇಹದ ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾರೆ. ನಿನ್ನೆ ತಡರಾತ್ರಿ ಬಸವನಬಾಗೇವಾಡಿಯಲ್ಲಿ ಕಳ್ಳರಿಂದ ಮನೆಗಳು ಕಳ್ಳತನಕ್ಕೆ ಯತ್ನ ನಡೆದಿದೆ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತೆ ಮೇರಿಗೆ ಪಟ್ಟಣದ ಪೋಲಿಸ ಸಿಬ್ಬಂಧಿ ತಕ್ಷಣವೇ ಸ್ಥಳಕ್ಕೆ ಬಂದು ದಾಳಿಮಾಡಿದ್ದಾರೆ. ಈ ವೇಳೆ ಪೋಲಿಸ ಪೇದೆ ರಮೇಶ ಓರ್ವ ಕಳ್ಳನ್ನು ಹಿಡಿದಾಗ ಮತ್ತೊರ್ವ ಕಳ್ಳನಿಂದ ಚಾಕು ಇರಿದು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ರಮೇಶ ವಿಜಯಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಗಳು ಭೇಟಿ ಪರಿಶೀಲನೆ ನಡೆಸಿದರು. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಫರಾದ ದಾಖಲಾಗಿದೆ.
ವರದಿ: ಕೃಷ್ಣಾ ಎಚ್. ರಾಠೋಡ




