—————————————ಕರ್ನಾಟಕ ರಾಜ್ಯ ವರದಿ
ಬೆಳಗಾವಿ: ಸರ್ಕಾರದ ಮೇಲೆ ಒಂದಷ್ಟು ವಿಶ್ವಾಸ ಏನಾದ್ರೂ ಉಳಿದಿದ್ದರೆ ಅದಕ್ಕೆ ಈ ಮೂವರು ಕಾರಣ.. ಮೊದಲನೇಯವರು ಪಿಡಬ್ಲ್ಯೂಡಿ ಸಚಿವರಾದ ಸತೀಶ್ ಜಾರಕಿಹೊಳಿ ಆಗಾಗ ರಾಜಕೀಯವಾಗಿ ಸದ್ದು ಮಾಡುತ್ತ ಸುದ್ದಿಯ ಕೇಂದ್ರ ಬಿಂದು ಆಗಿದ್ದರೂ ಸಹ.. ತಮ್ಮ ಇಲಾಖೆಯಲ್ಲಿ ಒಂದಷ್ಟು ಪಾಜಿಟಿವ್ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ.
ಕೇವಲ ವಿಧಾನಸೌಧ ಅಥವಾ ತಮ್ಮ ತವರು ಜಿಲ್ಲೆಗೆ ಸೀಮಿತರಾಗದೆ ನಿತ್ಯವೂ ರಾಜ್ಯದೆಲ್ಲೆಡೆ ಓಡಾಡಿಕೊಂಡು ರಸ್ತೆಗಳ ಗುಣಮಟ್ಟವನ್ನು ಪರಿಶೀಲನೆ ಮಾಡ್ತಿದ್ದಾರೆ. ರಸ್ತೆಗಳ ವಿಚಾರದಲ್ಲಿ ಪಕ್ಷಾತೀತವಾಗಿ ಅವರು ನಡೆದುಕೊಳ್ಳುತ್ತಿರುವುದು ವಿರೋಧಿಗಳನ್ನು ಕೂಡ ಮೆಚ್ಚಿಸಿದೆ
ಇನ್ನು ಕೃಷ್ಣ ಬೈರೇಗೌಡರು.ಕಂದಾಯ ಇಲಾಖೆ ನಿರ್ವಹಿಸುತ್ತಿರುವ ಇವರು, ವಿವಾದಕ್ಕೆ ಆಸ್ಪದ ನೀಡದೆ, ತಾವಾಯಿತು ತಮ್ಮ ಇಲಾಖೆಯಾಯಿತು ಅಂತ ಬಿಜಿಯಾಗಿದ್ದಾರೆ.ಜತೆಗೆ ಇಲಾಖೆಯಲ್ಲಿ ಒಂದಷ್ಟು ಪರಿಣಾಮಕಾರಿಯಾದಂತಹ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಜಿಎಸ್ಟಿ ವಿಚಾರದಲ್ಲಿ ಆಗುತ್ತಿರುವ ಗೊಂದಲಗಳನ್ನು ಬಗೆಹರಿಸುವಲ್ಲಿ ಇವರ ಪಾತ್ರ ದೊಡ್ಡದು.
ಇನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾಗಿರುವ ಶ್ರೀಮತಿ ನಾಗಲಕ್ಷ್ಮಿ ಚೌಧರಿ. ಇವರು ಸಹ ಜನರ ಕಷ್ಟಗಳಿಗೆ ಕಿವಿಯಗುತ್ತಾ ನಿರೀಕ್ಷೆ ಮೀರಿ ಕೆಲಸ ಮಾಡುತ್ತಿದ್ದಾರೆ. ಸಣ್ಣ ಸಣ್ಣ ಪ್ರಕರಣಗಳನ್ನು ಸಹ ಮುನ್ನೆಲೆಗೆ ತರುತ್ತಿರುವುದರಲ್ಲಿ ಇವರ ಪಾತ್ರ ಹಿರಿಯದು. ಕೇವಲ ಕಚೇರಿಗೆ ಸೀಮಿತವಾಗದೆ ರಾಜ್ಯದ್ಯಂತ ಓಡಾಡಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಇವರ ಕಾರ್ಯ ವೈಖರಿ ಗಮನ ಸೆಳೆದಿದೆ.
ವರದಿ: ರಾಜು ಮುಂಡೆ




