ಬೆಳಗಾವಿ: ಸದನದಲ್ಲಿ ವಿಪಕ್ಷ ನಾಯಕರು ಮಾತನಾಡುವಾಗ ಅದನ್ನು ಕೇಳುವ ವ್ಯವಧಾನವೂ ಆಡಳಿತ ಪಕ್ಷದವರಿಗೆ ಇಲ್ಲವೆಂದಾದರೆ, ಇದು ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು.9-10 ದಿನಗಳ ಕಾಲ ಸದನ ನಡೆಯುತ್ತದೆ. ಎರಡು ದಿನ ಕಳೆದಿದೆ.
ಸದನದ ಸಮಯ ವ್ಯರ್ಥ ಆಗಬಾರದು. ನಾಡಿನ ರೈತರ, ನಿರುದ್ಯೋಗಿಗಳ, ನೀರಾವರಿ ವಿಚಾರದಲ್ಲಿ ಸಮರ್ಪಕ ಉತ್ತರ ಪಡೆಯುವುದೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಸದನದಲ್ಲಿ ರಾಜ್ಯದ ರೈತರ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರ ಸ್ಪಂದಿಸುತ್ತಿದ್ದರೆ ಅದು ನಮಗೆ ಮಾಡುವ ಉಪಕಾರವಲ್ಲ; ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮೊನ್ನೆಯಿಂದ ಆರಂಭವಾಗಿದೆ. ನಾಡಿನ ಜ್ವಲಂತ ಸಮಸ್ಯೆ, ರೈತರ ಸಂಕಷ್ಟ, ಅಪೂರ್ಣ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಅಧಿವೇಶನ ಕರೆದಿದ್ದಾರೆ. ಇವರೇನೂ ನಮಗೆ ಉಪಕಾರ ಮಾಡುತ್ತಿಲ್ಲ ಎಂದು ತಿಳಿಸಿದರು.




