ಬೆಳಗಾವಿ : ನಾಲ್ಕು ವರ್ಷದ ಮಗನ ಜೊತೆ ತಂದೆ ಬೈಕ್‌ನಲ್ಲಿ ತೆರಳುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ದುರಂತ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಕ್ರಾಸ್ ಬಳಿ ಘಟನೆ ನಡೆದಿದೆ. ಬೈಕ್‌ನಲ್ಲಿ ತೆರಳುವಾಗ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.ಪರಿಣಾಮ ಕಣ್ಣೆದುರೇ ತನ್ನ ನಾಲ್ಕು ವರ್ಷದ ಮಗ ದುರಂತ ಸಾವು ಕಂಡ ಘಟನೆ ನಡೆದಿದೆ.
ಚಿಕ್ಕಬೂದನೂರ ಗ್ರಾಮದಿಂದ ನೇಸರಗಿ ಗ್ರಾಮದ ಕಡೆ ಬರುತ್ತಿದ್ದಾಗ ಈ ಆಪಘಾತ ನಡೆದಿದೆ. ಚಿಕ್ಕಬೂದನೂರ ಗ್ರಾಮದ ಪುಂಡಲಿಕ ಲಿಂಬಣ್ಣ ಗಿರೆಣ್ಣವರ (4) ಸಾವು ಕಂಡಿದ್ದರೆ, ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನೇಸರಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.




