ಚಿಟಗುಪ್ಪ:ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಮೊದಲ ಪರೀಕ್ಷೆಯಲ್ಲಿ ಬೀದರ ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸರ್ಕಾರಿ ಬಸವೇಶ್ವರ ಕಾಲೇಜಿನವಿದ್ಯಾರ್ಥಿನಿಯರು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿನಿಯರ ಫಲಿತಾಂಶದ ಸಾಧನೆಗೆ ಪ್ರಾಚಾರ್ಯರಾದ ಹಣಮಂತ ಪಿ.ಗೌಡಗಾಂವಕರ ಮತ್ತು ಸಿಬಿಸಿ ಕಮಿಟಿ ವತಿಯಿಂದ ಬಸವೇಶ್ವರ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ಭಾಗ್ಯಶ್ರೀ ತಂದೆ ನರಸಪ್ಪ, ಮಹಾಲಕ್ಷ್ಮಿ ತಂದೆ ಶಿವಪುತ್ರ,ಭಾಗ್ಯಶ್ರೀ ತಂದೆ ರಾಜಕುಮಾರ,ನಂದಿನಿ ತಂದೆ ಅಂಬಣ್ಣ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
ಬಳಿಕ ಪ್ರಾಚಾರ್ಯರಾದ ಹಣಮಂತ ಗೌಡಗಾಂವಕರ ಹಾಗೂ ಸಿಬಿಸಿ ಉಪಾಧ್ಯಕ್ಷ ಈಶ್ವರ ನೇಳಗಿ ಮಾತನಾಡಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಪ್ರಭು ಲಂಬುನೋರ,ಉಪನ್ಯಾಸಕರಾದ ರವೀಂದ್ರ ರೆಡ್ಡಿ,, ಸಂಜುಕುಮಾರ ಜುಮ್ಮಾ,ಸುನೀಲಕುಮಾರ,ಪ್ರೀತಿ,ಸಂಗೀತಾ ಉಪಸ್ಥಿತರಿದ್ದರು.
ವರದಿ:ಸಜೀಶ ಲಂಬುನೋರ