ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನಕಟ್ಟೆ ಕೆರೆಯಲ್ಲಿ ರಾಜಾರೋಷವಾಗಿ ನಡಿತಿದೆ ಮಣ್ಣು ದಂಧೆ…
ಎರಡು ಜೆ ಸಿ ಬಿ 15ಟ್ರ್ಯಾಕ್ಟರ್ ಗಳು ಕೆರೆಯಲ್ಲಿ ರಾಜಾರೋಷವಾಗಿ ಫಲವತ್ತಾದ ಮಣ್ಣು ತುಂಬಿಕೊಂಡು ಹೊಲಗಳಿಗೆ ಆಕ್ರಮವಾಗಿ ತೆಗೆದುಕೊಂಡು ಹೋಗುತಿದ್ದರೆ ಇದರ ಬಗ್ಗೆ ತಹಶೀಲ್ಧರ್ ಮತ್ತು ಪೊಲೀಸರಿಗೆ ಗೊತ್ತಿದ್ದರು ಕಣ್ಮುಚ್ಚಿ ಕುಳಿತ್ತಿದರೆ ಎಂದು ಸಾರ್ವಜನಿಕರು ಇಲಾಖೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ…
ಈ ಕೆರೆವು 190ಗುಂಟೆ (ನಾಲ್ಕು ಮುಕ್ಕಾಲು ಎಕರೆ )ವಿಸ್ತೀರ್ಣ ಹೊಂದಿದ್ದು, ಗ್ರಾಮದ ಪ್ರಭಾವಿ ವ್ಯಕ್ತಿಗಳು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪತ್ರಕರ್ತರಿಗೆ ಹಣವನ್ನು ನೀಡಬೇಕು ಎಂದು ರೈತರಿಂದ ದುಬಾರಿ ಹಣ ಪಡೆದು ಕೆರೆ ಮಣ್ಣನ್ನು ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಮಣ್ಣು ದಂಧೆ ಮಾಡುತ್ತಿದ್ದಾರೆ. ಪ್ರಶ್ನೆ ಮಾಡುವ ಸಾರ್ವಜನಿಕರಿಗೆ ಎಲ್ಲಾರು ನಾವು ಹೇಳಿದಾಗೆ ಕೇಳುತ್ತಾರೆ. ನೀವು ನಮ್ಮ ಏನೂ ಮಾಡಲು ಸಾಧ್ಯವಿಲ್ಲ ನಮಗೆ ರಾಜಕೀಯ ಬೆಂಬಲವಿದೆ ಎಂದು ರಾಜಾರೋಷವಾಗಿ ಮಾತನಾಡುತ್ತಾರೆ. ಜಿಲ್ಲೆಯ ಎಲ್ಲಾ ಕಡೆ ನಾವು ಈ ದಂಧೆ ಮಾಡುತ್ತೇವೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡುತ್ತಾರೆ. ಆಗಾಗಿ ಸಂಬಂಧಪಟ್ಟ ಇಲಾಖೆ ಅಕ್ರಮವಾಗಿ ದಂಧೆಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಿ,ಅಕ್ರಮ ಮಣ್ಣು ದಂಧೆಗೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕರ ಅಭಿಮತವಾಗಿದೆ….
ಮಣ್ಣು ಉಳಿಸಿ ಅಭಿಯಾನ ಸಮಿತಿಯ ಕದಂಬ ನಾ. ಅಂಬರೀಷ್ ರವರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರತಿಯೊಂದು ಸಭೆಗಳಲ್ಲೂ ಮಣ್ಣು ದಂಧೆ ಮಾಡುವವರ ವಿರುದ್ಧ ದೂರು ನೀಡಿದರು ರಾಜಾರೋಷವಾಗಿ ಹಾಡು ಹಗಲಲ್ಲೆ ಅಕ್ರಮವಾಗಿ ಮಣ್ಣು ಸಾಗಾಟ ಮಾಡುವವರ ಮಾಹಿತಿ ನೀಡಿ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದರು…
ವರದಿ: ಸ್ವಾಮಿ ಬಳೇಪೇಟೆ