Ad imageAd image

ಸೇಡಂ ತಾಲೂಕಿನಾದ್ಯಂತ ಮಕ್ಕಳ ಜೀವದ ಜೊತೆ ಆಟವಾಡುತ್ತಿರುವ ಸಾರಿಗೆ ಇಲಾಖೆ

Bharath Vaibhav
ಸೇಡಂ ತಾಲೂಕಿನಾದ್ಯಂತ ಮಕ್ಕಳ ಜೀವದ ಜೊತೆ ಆಟವಾಡುತ್ತಿರುವ ಸಾರಿಗೆ ಇಲಾಖೆ
WhatsApp Group Join Now
Telegram Group Join Now

ಸೇಡಂ: ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಗೆ ಶಾಲಾ ವಿದ್ಯಾರ್ಥಿಗಳು ಪ್ರಯಾಣ ಮಾಡಬೇಕಾದರೆ ತಮ್ಮ ಪ್ರಾಣವನ್ನು ಪಣಕ್ಕಿಡುವ ಪರಿಸ್ಥಿತಿ ಎದುರಾಗಿದೆ.

ಒಂದು ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಾಮರ್ಥ್ಯ ಸಂಖ್ಯೆ ಸುಮಾರು 50 ಜನರಿಗೆ ಇರುತ್ತದೆ ಆದರೆ ಸೇಡಂ ನಲ್ಲಿ ನೋಡಿದರೆ ಅದೇನೋ ಕಸದ ರಾಶಿಯಂತೆ ಶಾಲಾ ಮಕ್ಕಳನ್ನು ಹೊಯ್ಯುತ್ತಿರುವ ಬಸ್ ಗಳನ್ನ ಕಾಣಬಹುದಾಗಿದೆ.

ಸೇಡಂ ಡಿಪೋ ನಲ್ಲಿ ಬಸ್ ಗಳ ಕೊರತೆ ಹೆಚ್ಚಾಗಿ ಇರಬಹುದು ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ, ಯಾಕಂದರೆ ಸೇಡಂ ನಿಂದ ಗುರುಮಠಕಲ್ ಪ್ರಯಾಣಿಸಬೇಕಾದರೆ ಕೇವಲ ಗುರುಮಠಕಲ್ ಡಿಪೋ ಬಸ್ ಗಳು ಸಂಚಾರ ಹೆಚ್ಚಾಗಿ ಕಾಣುತ್ತಿದೆ ಹೊರತು ಸೇಡಂ ಡಿಪೋ ಬಸ್ ಗಳು ಕಂಡುಬರುವುದಿಲ್ಲ.

ಸೇಡಂ ನಿಂದ ಗುರುಮಠಕಲ್ ವಾಯ ಕೊಡ್ಲಾ, ಹುಳಗೋಳ, ನಾಮವಾರ, ಹಂದರಿಕಿ, ಹಾಗೂ ಮುಧೋಳ, ಕೊಲುಕುಂದ, ಮದನಾ, ಮೋತಕಪಲ್ಲಿ, ಇಟ್ಕಲ್ ಮತ್ತು ಯಾನಗುಂದಿ, ನಾಡೇಪಲ್ಲಿ ಮಾರ್ಗವಾಗಿ ಕೇವಲ ಗುರುಮಠಕಲ್ ಡಿಪೋ ಬಸ್ ಗಳ ಸಂಚಾರ ಹೆಚ್ಚಾಗಿ ಕಾಣುತ್ತಿದೆ ಆದ್ದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿಲ್ಲದೆ ಪರದಾಡುತ್ತಿರುವ ಘಟನೆ ಸಂಭವಿಸಿದ್ದು ಸೌಕರ್ಯವಿರುವ ಆ ಕೇವಲ ಬಸ್ ಗಳಿಗೆ ಹತ್ತಿಹೋಗುವ ಪ್ರಯತ್ನದಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು ಕಾಣಬಹುದು. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಸ್ ಹತ್ತಿದಾಗ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗುವ ಸಾಧ್ಯತೆಗಳು ಅತಿ ಹೆಚ್ಚಾಗಿ ಕಾಣುತ್ತಿವೆ. ಇದರಿಂದ ಮಕ್ಕಳ ಜೀವಕ್ಕೆ ಅಪಾಯವಾದರೆ ಯಾರು ಹೊಣೆಗಾರರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿ ಬಂದು ಆತಂಕಕ್ಕೆ ಗುರಿಯಾಗಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಬೇಕಾಗಿದೆ.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!