ಪುಣೆ : ಇಲ್ಲಿನ ದೌಂಡ್ ಎಂಬ ಪ್ರದೇಶದಲ್ಲಿ ದೊಡ್ಡ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು ಕಸದ ರಾಶಿಯಲ್ಲಿ ಭ್ರೂಣಗಳು ಪತ್ತೆಯಾಗಿವೆ. ಕಸದ ರಾಶಿಯ ಜೊತೆಯಲ್ಲಿ ಈ ಭ್ರೂಣಗಳನ್ನು ಬಿಸಾಡಲಾಗಿದೆ.
ಹೀಗೆ ಕಸದ ರಾಶಿಯ ನಡುವೆ ಸುಮಾರು 10 ರಿಂದ 12 ಭ್ರೂಣಗಳು ಪತ್ತೆಯಾಗಿದ್ದು, ಇವುಗಳನ್ನು ಪ್ಲಾಸ್ಟಿಕ್ ಬಾಕ್ಸ್‌ಗಳಲ್ಲಿ ತುಂಬಿ ಕಸದ ಜೊತೆ ಸೇರಿಸಿ ಬಿಸಾಡಲಾಗಿದೆ.ಈ ಘಟನೆಯಿಂದ ಅಕ್ರಮ ಗರ್ಭಪಾತದ ಜಾಲ ಬೆಳಕಿಗೆ ಬಂದಿದೆ.
ಈ ಬೆಳವಣಿಗೆಯಿಂದ ಪುಣೆಯ ದೌಂಡ್ ಪ್ರದೇಶದಲ್ಲಿ ಅಕ್ರಮ ಗರ್ಭಪಾತ ಕೇಂದ್ರ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಬಯಲಾಗಿದೆ.ಇದೊಂದು ಅತ್ಯಂತ ಘೋರ ಕೃತ್ಯವಾಗಿದ್ದು, ಈ ಬಗ್ಗೆ ಕೂಡಲೇ ತನಿಖೆ ಮಾಡಬೇಕು ಎಂದು ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.