ಬೆಂಗಳೂರು: ಹಾಸನ ಪೆನ್ ಡ್ರೈವ್ ಕೇಸ್ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಹೊರ ಹಾಕಿದ್ದಾರೆ. ಅಶ್ಲೀಲ ವೀಡಿಯೋ ಕೇಸ್ ಸಂಬಂಧ ಸತ್ಯ ಆದಷ್ಟು ಬೇಗ ಹೊರ ಬರಲಿದೆ ಎಂಬುದಾಗಿ ಹೇಳಿದ್ದಾರೆ.
ಇಂದು ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಈ ಬಗ್ಗೆ ಬರೆದು ಪೋಸ್ಟ್ ಮಾಡಿರುವಂತ ಅವರು, ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ.ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ಸಿಐಡಿ ಎಸ್‌ಐಟಿ ತಂಡ ನೀಡಿರುವಂತ ನೋಟಿಸ್ ಗೆ ತಮ್ಮ ವಕೀಲರ ಮೂಲಕ ಪ್ರತ್ಯುತ್ತರ ನೀಡಿರುವಂತ ಸಂಸದ ಪ್ರಜ್ವಲ್ ರೇವಣ್ಣ ಅವರು, ನನ್ನ ಕಕ್ಷಿದಾರರು ವಿದೇಶದಲ್ಲಿ ಇದ್ದಾರೆ. ಅವರಿಗೆ ನೋಟಿಸ್ ನೀಡಿರುವ ಬಗ್ಗೆ ತಿಳಿಸಲಾಗಿದೆ. 7 ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗಲಿದ್ದಾರೆ. ಅಲ್ಲಿಯವರೆಗೆ ಕಾಲಾವಕಾಶ ನೀಡುವಂತೆ ಕೋರಿದ್ದಾರೆ.
ಒಟ್ಟಾರೆಯಾಗಿ ಮೇ.3ರಂದು ಬೆಂಗಳೂರಿಗೆ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ಬರಲಿದ್ದಾರೆ ಎನ್ನಲಾಗಿತ್ತು. ಇದೀಗ ಅವರ ಪೋಸ್ಟ್ ನೋಡಿದ್ರೆ ಇನ್ನೂ ಕೆಲ ದಿನಗಳು ವಿದೇಶದಲ್ಲೇ ಇರಲಿದ್ದಾರೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.