Ad imageAd image

ಐಸ್ ಕ್ರೀಂ ಸೇವಿಸಿ ಅವಳಿ ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ : ಹೆತ್ತ ತಾಯಿಯೇ ವಿಷವುಣಿಸಿ ಹತ್ಯೆ 

Bharath Vaibhav
ಐಸ್ ಕ್ರೀಂ ಸೇವಿಸಿ ಅವಳಿ ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ : ಹೆತ್ತ ತಾಯಿಯೇ ವಿಷವುಣಿಸಿ ಹತ್ಯೆ 
WhatsApp Group Join Now
Telegram Group Join Now

ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ ಮಕ್ಕಳನ್ನು ಕೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಅನುಮಾನಾಸ್ಪದವಾಗಿ ಅವಳಿ-ಜವಳಿ ಮಕ್ಕಳು ಮೃತಪಟ್ಟಿದ್ದರು. ಐಸ್ ಕ್ರೀಂ ತಿಂದು ಅಸ್ವಸ್ಥಗೊಂಡು ಮಕ್ಕಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ ಪೊಲೀಸರ ವಿಚಾರಣೆ ವೇಳೆ ಮಹಿಳೆ ಪೂಜಾ ತಾನೇ ಊಟದಲ್ಲಿ ವಿಷ ಬೆರಸಿ ಹೆತ್ತ ಮಕ್ಕಳನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ಐಸ್ ಕ್ರೀಂ ತಿಂದ ಬಳಿಕ ನಿನ್ನೆ ಒಂದುವರೆ ವರ್ಷದ ತ್ರಿಶೂಲ್ ಹಾಗೂ ತ್ರಿಶಾ ಎಂಬ ಅವಳಿ ಮಕ್ಕಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದರು. ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗು ಪ್ರಸನ್ನ ದಂಪತಿಯ ಮಕ್ಕಳಾಗಿದ್ದರು.

ತಾಯಿ ಪೂಜಾಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಹೆತ್ತ ಕಂದಮ್ಮಗಳನ್ನು ತಾನೇ ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಊಟದಲ್ಲಿ ವಿಷ ಬೆರೆಸಿ ಮೂವರು ಮಕ್ಕಳಿಗೆ ನೀಡಿ ಬಳಿಕ ತಾನೂ ವಿಷ ಸೇವಿಸಿದ್ದಳು. ತೀವ್ರ ಅಸ್ವಸ್ಥಗೊಂಡ ಇಬ್ಬರು ಅವಳಿ ಮಕ್ಕಳು ಕೊನೆಯುಸಿರೆಳೆದಿದ್ದಾರೆ. ಆರೋಪಿ ಪೂಜಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!