ಕೆನಡಾ : ಕೆನಡಾ ಅಪರೂಪದ ಖಗೋಳ ವಿಸ್ಮಯವೊಂದಕ್ಕೆ ಸಾಕ್ಷಿಯಾಗಿದೆ. ಆಗಸದಲ್ಲಿ ಎರಡು ಸೂರ್ಯ ಒಟ್ಟಿಗೇ ಕಾಣಿಸಿಕೊಂಡಿದ್ದು, ಜನರು ವಿಸ್ಮಯಭರಿತರಾಗಿ ಈ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.
ಸೂರ್ಯನನ್ನು ಭಾಗಶಃ ಚಂದ್ರ ಅಡ್ಡಗಟ್ಟಿದಾಗ ಈ ರೀತಿಯ ದೃಷ್ಟಿ ಭ್ರಮೆ ಉಂಟಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಮಾ. 29 ರಂದು ವರ್ಷದ ಮೊದಲ ಸೂರ್ಯಗ್ರಹಣವೂ ಸಹ ಇತ್ತು.
ಅಂದು ಈ ವಿಚಿತ್ರ ವಿದ್ಯಮಾನ ಸಂಭವಿಸಿದ್ದು, ಬೆಳಗ್ಗೆ ಬೇಗ ಏಳುವ ಅಭ್ಯಾಸವಿರುವವರು ಸಮುದ್ರ ತೀರದಲ್ಲಿ ಈ ದೃಶ್ಯವನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಈ ದೃಶ್ಯವು ಎರಡು ಸೂರ್ಯ ಒಟ್ಟಿಗೆ ಉದಯವಾಗುವ ರೀತಿಯಲ್ಲಿ ಕಾಣುತ್ತದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.