Ad imageAd image

ಮ್ಯಾನ್ಮಾರ್ ಭೂಕಂಪದಲ್ಲಿ 1700 ಸಾವು : ಎಮರ್ಜೆನ್ಸಿ ಘೋಷಿಸಿದ ವಿಶ್ವಸಂಸ್ಥೆ 

Bharath Vaibhav
ಮ್ಯಾನ್ಮಾರ್ ಭೂಕಂಪದಲ್ಲಿ 1700 ಸಾವು : ಎಮರ್ಜೆನ್ಸಿ ಘೋಷಿಸಿದ ವಿಶ್ವಸಂಸ್ಥೆ 
WhatsApp Group Join Now
Telegram Group Join Now

ಮ್ಯಾನ್ಮಾರ್ : ದಶಕದ ದೊಡ್ಡ ಭೂಕಂಪಕ್ಕೆ ಮ್ಯಾನ್ಮಾರ್ ಹಾಗೂ ಬ್ಯಾಂಕಾಕ್ ಅಕ್ಷರಶಃ ನಡುಗಿದ್ದು, ಉಭಯ ದೇಶದಲ್ಲಿ ನರಕವೇ ಸೃಷ್ಟಿಮಾಡಿದೆ. ಭೂಮಿ ಗಢ ಗಢ ನಡುಗುವಿಕೆಗೆ ಜನರ ಬದುಕು ಹೈರಾಣಾಗಿದೆ.

ಮ್ಯಾನ್ಮಾರ್‌ನಲ್ಲಿ ಶುಕ್ರವಾರ ನಡೆದ 7.7 ತೀವ್ರತೆಯ ಭೂಕಂಪದ ನಂತರ ಜನಜೀವನ ನಲುಗಿದ್ದು, ಸಾವಿನ ಸಂಖ್ಯೆ 1700 ಕ್ಕೂ ಹೆಚ್ಚು ದಾಟಿದೆ.ಗಾಯಗೊಂಡವರ ಸಂಖ್ಯೆ 3,500 ಕ್ಕೆ ಏರಿಕೆಯಾಗಿದೆ.ಕನಿಷ್ಠ 139 ಇತರರು ಕಾಣೆಯಾಗಿದ್ದು, ಅವರ ಶೋಧ ನಡೆದಿದೆ.

ವಿಶ್ವ ಆರೋಗ್ಯ ಸಂಸ್ಥೆ ಇದೊಂದು ಗ್ರೇಡ್ 3 ಎಮರ್ಜೆನ್ಸಿ ಎಂದು ಘೋಷಿಸಿದ್ದು , 8 ಮಿಲಿಯನ್ ಡಾಲರ್ ಪರಿಹಾರದ ಮೊತ್ತ ಅವಶ್ಯಕತೆ ಇದೆ. ಮುಂದಿನ 30 ದಿನ ನಿರ್ಣಾಯಕವಾಗಿದ್ದು, ರೋಗರುಜಿನ ಹರಡುವುದನ್ನ ತಪ್ಪಿಸಲು ಹಾಗೂ ಜನರ ಜೀವನ ಸುಧಾರಣೆಗೆ ಆರ್ಥಿಕ ಸಹಾಯ ಅತ್ಯಗತ್ಯ ಎಂದಿದೆ.

ಮ್ಯಾನ್ಮಾರ್ ದೇಶ ಈಗ ಶವಗಳ ರಾಶಿಯಿಂದ ತುಂಬಿ ಹೋಗಿದ್ದು, ಎಲ್ಲಿ ನೋಡಿದರೂ ಬರೀ ಕುಸಿದು ಬಿದ್ದ ಕಟ್ಟಡಗಳೇ ಕಾಣುತ್ತಿವೆ. ಸದ್ಯ ಭಾರತ ಮ್ಯಾನ್ಮಾರ್ ಬೆಂಬಲಕ್ಕೆ ಹಸ್ತ ಚಾಚಿದ್ದು, ಮತ್ತಷ್ಟು ದೇಶಗಳು ಸಹಾಯಕ್ಕೆ ಮುಂದೆ ಬರಬೇಕಿದೆ.

WhatsApp Group Join Now
Telegram Group Join Now
Share This Article
error: Content is protected !!