Ad imageAd image

ಮಗನ ಮೈಮೇಲೆ ಕುಳಿತು ಕತ್ತು ಹಿಸುಕಿ, ತಲೆ ಚಚ್ಚಿ ತಳಿಸಿದ ಪಾಪಿ ತಾಯಿ: ವಿಡಿಯೋ ವೈರಲ್

Bharath Vaibhav
ಮಗನ ಮೈಮೇಲೆ ಕುಳಿತು ಕತ್ತು ಹಿಸುಕಿ, ತಲೆ ಚಚ್ಚಿ ತಳಿಸಿದ ಪಾಪಿ ತಾಯಿ: ವಿಡಿಯೋ ವೈರಲ್
WhatsApp Group Join Now
Telegram Group Join Now

ಉತ್ತರಾಖಂಡದ ರೂರ್ಕಿಯ ಜಬ್ರೆದಾದಲ್ಲಿ ಕ್ರೂರ ತಾಯಿಯೊಬ್ಬಳು ತನ್ನ ಮಗುವಿಗೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಾಯಿ ಕೂಡ ತನ್ನ ಮಗುವನ್ನು ಎಷ್ಟು ಕೆಟ್ಟದಾಗಿ ಹೊಡೆಯಬಹುದು ಎಂಬುದನ್ನ ಈ ವೀಡಿಯೊ ತೋರಿಸುತ್ತದೆ.ವಾಸ್ತವವಾಗಿ, ತಾಯಿಯು ತನ್ನ ಮಗುವಿಗೆ ಯಾವುದೇ ಸಣ್ಣ ಅಪಾಯವಾದ್ರು, ತಡೆದುಕೊಳ್ಳವುದಿಲ್ಲ. ಆದರೆ ಈ ವಿಡಿಯೋದಲ್ಲಿ ತಾಯಿಯೊಬ್ಬಳು ತನ್ನ 12 ವರ್ಷದ ಮಗಳನ್ನು ಹೊಡೆಯುತ್ತಿರುವ ಪರಿ ನೋಡಿದ್ರೆ, ಎದೆ ಝಲ್ ಎನ್ನುತ್ತೆ. ವಿಡಿಯೋ ನೋಡಿದ ನೆಟ್ಟಗರು, ಮಹಿಳೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಯಿಯೊಬ್ಬಳು ತನ್ನ ಮಗುವಿನ ಮೇಲೆ ದೌರ್ಜನ್ಯ ಎಸಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಜನರು ವಿಡಿಯೋವನ್ನ ಶೇರ್ ಮಾಡಿ ತಾಯಿಯ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅದ್ರಂತೆ, ವಿಡಿಯೋ ವೈರಲ್ ನಂತ್ರ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು, ತನ್ನ ಮಗುವನ್ನ ಇಷ್ಟೊಂದು ಕೆಟ್ಟದಾಗಿ ತಳಿಸಿರುವ ಬಗ್ಗೆ ತಾಯಿಯನ್ನ ಪ್ರಶ್ನಿಸಿದ್ದಾರೆ.

ಎರಡು ನಿಮಿಷಗಳ ವೈರಲ್ ವೀಡಿಯೊದಲ್ಲಿ, ಮಹಿಳೆಯೊಬ್ಬರು ತನ್ನ 12 ವರ್ಷದ ಮಗನನ್ನ ಅಮಾನುಷವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ವೀಡಿಯೋದಲ್ಲಿ ಮಹಿಳೆ ಆತನಿಗೆ ಥಳಿಸಿದ್ದು ಮಾತ್ರವಲ್ಲದೆ ಆತನ ಎದೆಯ ಮೇಲೆ ಕುಳಿತು ತಲೆ ನೆಲಕ್ಕೆ ಹೊಡೆದಿದ್ದಾಳೆ, ತಾಯಿಯ ಹೊಡೆತದಿಂದ ನೋಯುತ್ತಿರುವ ಮಗು ಪದೇ ಪದೇ ನೀರು ಕೇಳುತ್ತಲೇ ಇದೆ. ಆದ್ರೆ, ಮಹಿಳೆ ಮಾತ್ರ ನೀರು ಕೊಡುವ ಬದಲು ಹೆಚ್ಚು ಹೆಚ್ಚು ಬಾರಿಸಿದ್ದಾರೆ.

ಮಗುವನ್ನ ಥಳಿಸುತ್ತಿರುವುದನ್ನ ಬೇರೆಯವರು ವಿಡಿಯೋ ಮಾಡಿದ್ದಾರೆ. ಮಹಿಳೆ ಝಬ್ರೆಡಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗ್ತಿದ್ದು, ವೀಡಿಯೋ ಜತೆಗೆ ಆಕೆಯ ಹೆಸರು, ವಿಳಾಸವೂ ಗೊತ್ತಾಗಿದೆ. ಜಬ್ರೆದಾ ಪೊಲೀಸರು ಮಹಿಳೆಯನ್ನ ವಿಚಾರಣೆಗೆ ಸಂಪರ್ಕಿಸಿದಾಗ, ಅವರು ವೀಡಿಯೊವನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಜಬ್ರೆದಾ ಪೊಲೀಸ್ ಠಾಣೆ ಪ್ರಭಾರಿ ಅಂಕುರ್ ಶರ್ಮಾ ತಿಳಿಸಿದ್ದಾರೆ.

ವಿಚಾರಣೆಗೆಂದು ಮನೆಗೆ ಹೋದಾಗ ತಾಯಿಯ ಮನೆ ಝಬ್ರೆದಾದಲ್ಲಿ ಇರುವುದು ಪತ್ತೆಯಾಗಿದೆ. ಆಕೆಗೆ ದೇವಬಂದ್‌ನ ವ್ಯಕ್ತಿಯೊಂದಿಗೆ ವಿವಾಹವಾಗಿದೆ. ಈಗ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ದಾಳಿಯ ಬಗ್ಗೆ ಪೊಲೀಸರು ಮಹಿಳೆಯನ್ನ ಕೇಳಿದಾಗ, ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಜಬ್ರೆದಾದಲ್ಲಿ ವಾಸಿಸುತ್ತಿದ್ದು, ಮಕ್ಕಳ ಖರ್ಚಿಗೆ ಪತಿಯಿಂದ ಹಣ ಬೇಕಿದ್ದರೂ ಕೊಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.ಮಗುವಿನ ಖರ್ಚಿಗಾಗಿ ಹಣ ಕಳುಸುವಂತೆ ಪತಿಗೆ ಈ ವಿಡಿಯೋ ಮಾಡಿ ಕಳುಹಿಸಿದ್ದಾಳೆ ಎಂದಿದ್ದಾರೆ. ಈ ವಿಡಿಯೋವನ್ನ ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಧ್ಯ ವೈರಲ್ ಮಾಡಿದ್ದಾರೆ.

https://x.com/ManojSh28986262/status/1813561038228582910

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!