Ad imageAd image

ರಸ್ತೆ ನಿರ್ಮಿಸಿ ಕೊಟ್ಟಿದ್ದಕ್ಕೆ ,ಕೃತಜ್ಞತೆ ಸಲ್ಲಿಸಿದ ನಾಗರಿಕರು,ಭರವಸೆ ಮೂಡಿದೆ ಹಿಂಡಲಗಾ ಗ್ರಾಮಸ್ಥರು

Bharath Vaibhav
ರಸ್ತೆ ನಿರ್ಮಿಸಿ ಕೊಟ್ಟಿದ್ದಕ್ಕೆ ,ಕೃತಜ್ಞತೆ ಸಲ್ಲಿಸಿದ ನಾಗರಿಕರು,ಭರವಸೆ ಮೂಡಿದೆ ಹಿಂಡಲಗಾ ಗ್ರಾಮಸ್ಥರು
WhatsApp Group Join Now
Telegram Group Join Now

ಬೆಳಗಾವಿ: -ಹಿಂಡಲಗಾ ಗಣೇಶ್ ನಗರದ ಬಂಜಾರಾ ಕಾಲೋನಿಯ ರಸ್ತೆಗಳನ್ನು‌ ನಿರ್ಮಾಣ ಮಾಡಿ ಕೊಟ್ಟ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಗುರುವಾರ ಸಂಜೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನಿವಾಸಕ್ಕೆ ಆಗಮಿಸಿ ಕೃತಜ್ಞತೆ ಸಲ್ಲಿಸಿದರು.

ನಮ್ಮ ಬೇಡಿಕೆಗೆ ಸ್ಪಂದಿಸಿ ಅತ್ಯಂತ ತ್ವರಿತವಾಗಿ ರಸ್ತೆ ನಿರ್ಮಿಸುವ ಮೂಲಕ ನಮ್ಮ ಕಷ್ಟವನ್ನು ಪರಿಹರಿಸಿದ್ದೀರಿ. ನಿಮ್ಮ ಸಹಾಯಕ್ಕೆ ಧನ್ಯವಾದ ಸಲ್ಲಿಸುವುದು ನಮ್ಮ ಕರ್ತವ್ಯ. ನಿಮ್ಮಂತ ಜನಪ್ರತಿನಿಧಿಯನ್ನು ಪಡೆದಿದ್ದು ನಮ್ಮ ಸುಧೈವ ಎಂದು ನಾಗರಿಕರು ಹೇಳಿದರು. ನಿಮ್ಮಿಂದಾಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಇಂದು ಬದಲಾಗಿದೆ. ನಾಗರಿಕರಲ್ಲಿ ಹೊಸ ಆಶಾಕಿರಣ ಮೂಡಿದೆ. ವ್ಯವಸ್ಥೆಯಲ್ಲಿ ಭರವಸೆ ಮೂಡಿದೆ. ಹಾಗಾಗಿ ನಿಮಗೆ ನಾವು ಋಣಿಯಾಗಿದ್ದೇವೆ ಎಂದು ಹೇಳಿದರು.

ಈ ಸಮಯದಲ್ಲಿ ರಫಿಕ್ ಶೇಖ್, ಜಾನ್ಸನ್, ಎಸಯ್ಯ, ಜಾ‌ನ್ ದಾಸ್, ಅನುಶ್ರೀಯಾ ಕೋಲೆ, ಸಂಗೀತಾ ಕೋಟ್ರೆ, ಮೊಬಿನಾ ಸನದಿ, ಅನಿತಾ ಶಹಾಪೂರಕರ್, ಈಬೂ, ಸೂರ್ಯಕಾಂತ ದೋಶಿ ಉತ್ತಮ ಜಾಮದಾರ್, ರಾಮಯ್ಯ, ಅರೀಫ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ.

WhatsApp Group Join Now
Telegram Group Join Now
Share This Article
error: Content is protected !!