————ಪೊಲೀಸ್ ಠಾಣೆ ಸಿಬ್ಬಂದಿಗೆ ಅಭಿನಂದನೆ
ನಿಪ್ಪಾಣಿ: ಹೌದು ಕರ್ಕಶ ಹಾಗೂ ಏರು ಧ್ವನಿಯಲ್ಲಿ ಡಾಲ್ಬಿ ಹಾಕಿ ಕುಣಿದು ಕುಪ್ಪಳಿಸುವ ಯುವಕರಿಗೆ ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್ ಬಿರಾದಾರ್ ಅವರ ದಕ್ಷ ಆಡಳಿತದಲ್ಲಿ ತಾಲೂಕಿನ ಕೊನೆಯ ಗ್ರಾಮ ಮಾನಕಾಪುರದಲ್ಲಿ ನೋ ಡಾಲ್ಬಿ ಆದೇಶ ಹೊರಡಿಸಿ ಸಂಪೂರ್ಣ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ರೈತರ ಹಬ್ಬ ಕಾರ ಹುಣ್ಣಿಮೆಯನ್ನು ಹಿರಿಯ ರೈತರು ಗ್ರಾಮಸ್ಥರು ಅತ್ಯಂತ ಶಾಂತ ಹಾಗೂ ಪರಂಪರೆಯಂತೆ ವೃಷಭ ಪೂಜೆ ಮಾಡಿ ಎತ್ತುಗಳ ಮೆರವಣಿಗೆಯೊಂದಿಗೆ ಸಂಭ್ರಮವನ್ನು ಆಚರಿಸಿದರು.
ನಿಪ್ಪಾಣಿ ತಾಲೂಕಿನ ಕೊನೆಯ ಗ್ರಾಮ ಮಾನ್ಕಾಪುರದಲ್ಲಿ ಕಳೆದ ಕೆಲವರ್ಷಗಳಿಂದ ಯುವಕರು ಪ್ರತಿ ಹಬ್ಬದಲ್ಲೂ ಡಾಲ್ಬಿ ಹಾಕಿ ಕುಣಿದು ಕುಪ್ಪಳಿಸಿ ಗ್ರಾಮದ ವೃದ್ಧರು, ಗರ್ಭಿಣಿ ಮಹಿಳೆಯರು, ಚಿಕ್ಕ ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಯುವಕ ಮಂಡಳಗಳಿಗೆ ಕಡಿವಾಣ ಹಾಕಿದ್ದರಿಂದ ಹಾಗೂ ಮಾನಕಾಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳಿಂದ ಆದೇಶ ನೀಡಿದ್ದರಿಂದ ಗ್ರಾಮದಲ್ಲಿಯ ಹಿರಿಯರು ಬಿವಿ ಫೈವ್ ನ್ಯೂಸ್ ವರದಿಗಾರರೊಂದಿಗೆ ತಮ್ಮ ಸಂತಸ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾನ್ಕಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ ಮಹಾಕಾಳೆ ಸಾಮಾಜಿಕ ಕಾರ್ಯಕರ್ತರಾದ ಧನಂಜಯ್ ಮಾಳಿ ಮಾತನಾಡಿದರು. ನಿಪ್ಪಾಣಿ ತಾಲೂಕಿನ ಗಡಿ ಗ್ರಾಮಗಳಾದ ಕುನ್ನೂರ್ ಮಂಗೂರ್ ಡೋ ಣೆವಾಡಿ ಮಾನ್ಕಾಪುರ್ ಸೇರಿದಂತೆ 15 ಕ್ಕು ಅಧಿಕ ಹಳ್ಳಿಗಳಲ್ಲಿ ಈಗಾಗಲೇ ಡಾಲ್ಬಿ ನಿಷೇಧ ಕುರಿತು ಸದಲಗಾ ಪೋಲಿಸ ಠಾಣೆ ಅವರಿಂದ ಜಾಗೃತಿ ಮೂಡಿಸಲಾಗುತ್ತಿದ್ದು ಸದರಿ ಗ್ರಾಮಸ್ಥರಿಂದ ಪೊಲೀಸ್ ಸಿಬ್ಬಂದಿಯ ಕಾರ್ಯಾಚರಣೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಮಹಾವೀರ ಚಿಂಚಣೆ




