ಚಾಮರಾಜನಗರ: ಸಂತೆಮರಹಳ್ಳಿ ಸಮೀಪದ ಬಾನಹಳ್ಳಿ ಗ್ರಾಮದ ಮಹೇಶ್ ಎಂಬುವರ ಜಮೀನಿನಲ್ಲಿ ಸಬ್ ಮರ್ಸಿಬಲ್ ಮೋಟರ್ ಕಳ್ಳತನ ಮಾಡಿದ್ದ ಇಬ್ಬರನ್ನು ಹಿಡಿದು ಪೋಲೀಸರ ವಸಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.
ಬಾನಹಳ್ಳಿ ಗ್ರಾಮದ ಜಮೀನಿನಲ್ಲಿ ಇಡಲಾಗಿದ್ದ ಸಬ್ ಮರ್ಸಿಬಲ್ ಮೋಟರ್ ನ್ನು ರಾತ್ರೋ ರಾತ್ರಿ, ಮೂರ್ತಿ s/o ಮಾದಯ್ಯ, ಹಾಗೂ ಚಂಗಚಳ್ಳಿ ಗ್ರಾಮದ ನಿಂಗರಾಜು ಎಂಬುವ ವ್ಯಕ್ತಿಗಳು ಸೇರಿ ಮಾಡಿರುವ ಘಟನೆ ಎಂದು ಅನುಮಾನ ಬಂದು ಅದೇ ಗ್ರಾಮದ ಮೂರ್ತಿ ಎಂಬಾತನನ್ನು ವಿಚಾರಿಸಿದಾಗ ನಾನೆ ಕಳ್ಳತನ ಮಾಡಿ ಚಂಗಚಹಳ್ಳಿಯ ಚಂದ್ರಶೇಖರವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಚಂಗಚಳ್ಳಿ ನಿಂಗರಾಜುವಿಗೆ ಕೊಡುತ್ತಿದ್ದೆ ಎಂದು ಗ್ರಾಮಸ್ಥರ ಸಮ್ಮುಖದಲ್ಲಿ ತಪ್ಪು ಒಪ್ಪಿಕೊಂಡಿದ್ದಾನೆ.
ಬಾನಹಳ್ಳಿಯ ರೈತರು ಹಾಗೂ ಗ್ರಾಮಸ್ಥರು ಸೇರಿ ಪೊಲೀಸರಿಗೆ ಮಾಹಿತಿ ನೀಡಿ ಇಬ್ಬರನ್ನು ಪೊಲೀಸರ ವಸಕ್ಕೆ ನೀಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು
ಬಾನಹಳ್ಳಿ ರೈತ ಮಹೇಶ್ ರವರು ಮಾತನಾಡಿ ಈ ಹಿಂದೆಯೂ ಗ್ರಾಮದ ಹಲವಾರು ಜಮೀನಿನಲ್ಲಿ ಇದೇರೀತಿ 8 ಸಬ್ ಮರ್ಸಿಬಲ್ ಕಳುವಾಗಿದೆ ಆದರೆ ಪದೇ ಪದೇ ಇಂತಹ ಘಟನೆ ಸಂಭವಿಸಿದ ಕಾರಣ ಅನುಮಾನ ಬಂದ ಕೂಡಲೇ ಮೂರ್ತಿ ಎಂಬುವವನನ್ನು ಹಿಡಿದು ಕೇಳಿದಾಗ ಸತ್ಯ ಹೊರಹಾಕಿದಾನೆ ಅವಾಗ ಪೊಲೀಸರಿಗೆ ಇವರನ್ನು ಒಪ್ಪಿಸಲಾಯಿತು. ಕೂಡಲೇ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವರದಿ : ಸ್ವಾಮಿ ಬಳೇಪೇಟೆ




