ನವದೆಹಲಿ : 2000 ಮತ್ತು 2023ರ ನಡುವೆ ಭಾರತದ ಒಂದು ಪ್ರತಿಶತ ಶ್ರೀಮಂತರ ಸಂಪತ್ತು ಶೇಕಡಾ 62ರಷ್ಟು ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾದ ಜಿ -20 ಅಧ್ಯಕ್ಷತೆಯ ಸಂದರ್ಭದಲ್ಲಿ ಬಿಡುಗಡೆಯಾದ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ನೊಬೆಲ್ ಪ್ರಶಸ್ತಿ ವಿಜೇತ ಜೋಸೆಫ್ ಸ್ಟಿಗ್ಲಿಟ್ಜ್ ನೇತೃತ್ವದ ಅಧ್ಯಯನವು ಜಾಗತಿಕ ಅಸಮಾನತೆಯು ಬಿಕ್ಕಟ್ಟಿನ ಮಟ್ಟವನ್ನ ತಲುಪಿದ್ದು, ಪ್ರಜಾಪ್ರಭುತ್ವ, ಆರ್ಥಿಕ ಸ್ಥಿರತೆ ಮತ್ತು ಹವಾಮಾನ ಪ್ರಗತಿಗೆ ಬೆದರಿಕೆ ಹಾಕುತ್ತಿದೆ ಎಂದು ಎಚ್ಚರಿಸಿದೆ.
ಜಾಗತಿಕ ಅಸಮಾನತೆಯ ಕುರಿತಾದ ಸ್ವತಂತ್ರ ತಜ್ಞರ ಜಿ -20 ಅಸಾಧಾರಣ ಸಮಿತಿಯು, ಜಾಗತಿಕವಾಗಿ ಅಗ್ರ ಒಂದು ಪ್ರತಿಶತ ಶ್ರೀಮಂತರು 2000 ಮತ್ತು 2024ರ ನಡುವೆ ಸೃಷ್ಟಿಯಾದ ಎಲ್ಲಾ ಹೊಸ ಸಂಪತ್ತಿನ 41 ಪ್ರತಿಶತವನ್ನು ಪಡೆದುಕೊಂಡಿದ್ದಾರೆ ಎಂದು ಕಂಡುಹಿಡಿದಿದೆ. ಆದ್ರೆ, ಕೆಳಗಿನ ಅರ್ಧವು ಕೇವಲ ಒಂದು ಪ್ರತಿಶತವನ್ನು ಮಾತ್ರ ಪಡೆದುಕೊಂಡಿದೆ. ಸಮಿತಿಯಲ್ಲಿ ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ವಿನ್ನಿ ಬ್ಯಾನಿಮಾ ಮತ್ತು ಇಮ್ರಾನ್ ವಲೋಡಿಯಾ ಸೇರಿದ್ದಾರೆ.




